ರಾಕಿಂಗ್ ದಂಪತಿಯ ಮನೆಗೆ ಹೊಸ ಅತಿಥಿ ಆಗಮನ !

ರಾಕಿಂಗ್ ದಂಪತಿಯ ಮನೆಗೆ ಹೊಸ ಅತಿಥಿ ಆಗಮನ !

ಬೆಂಗಳೂರು:ದೀಪಾವಳಿ ಹಬ್ಬದ ಸಂಭ್ರಮ ಸಡಗರದ ಮಧ್ಯೆಯೇ ಸ್ಟಾರ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಬಾಳಲ್ಲಿ ಮತ್ತೊಂದು ಖುಷಿಯ ಸಂಗತಿ ಉಂಟಾಗಿದೆ.

ಯಶ್ ಮತ್ತು ರಾಧಿಕಾ ಸ್ಯಾಂಡಲ್ ವುಡ್ ನ ಲವ್ಲಿಕಪಲ್ ಎಂದೇ ಖ್ಯಾತರಾಗಿದ್ದಾರೆ. ತೆರೆಯ ಮೇಲೆ ಮೋಡಿ ಮಾಡಿದ್ದ ಈ ಜೋಡಿ ನಿಜ ಜೀವನದಲ್ಲೂ ಕೂಡಿ ಬಾಳುತ್ತಿದ್ದಾರೆ. ಸುಂದರ ವೈವಾಹಿಕ ಜೀವನ ನಡೆಸುತ್ತಿರುವ ಈ ಜೋಡಿಗೆ ಐರಾ ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ. ಈಗಾಗಲೇ ಐರಾ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ಈಗ ರಾಕಿಂಗ್ ದಂಪತಿಯ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.

ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ರಾಕಿಂಗ್ ಜೋಡಿಗೆ ಗಂಡು ಮಗುವಾಗಿದೆ.ಇಂದು ಬೆಳ್ಳಿಗ್ಗೆಯಷ್ಟೆ ರಾಧಿಕಾ ಪಂಡಿತ್  ಫೋರ್ಟೀಸ್ ಆಸ್ಪತ್ರೆಗೆ ದಾಖಲಾಗಿದ್ದರು.ಮೊದಲ ಮಗಳು ಆಯ್ರಾಗೆ 8 ತಿಂಗಳು ತುಂಬುವ ಮುನ್ನವೇ ರಾಕಿಂಗ್ ದಂಪತಿ ಯಶ್ ಹಾಗೂ ರಾಧಿಕಾ ಎರಡನೇ ಮಗುವಿಗೆ ತಾಯಿಯಾಗುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದರು.. .