ಉತ್ತರ ಕರ್ನಾಟಕ ಮತ್ತೆ ಜಲ ಪ್ರವಾಹದಿಂದ ತತ್ತರ..!

ಕರ್ನಾಟಕಕ್ಕೆ ಪ್ರವಾಹ ಪರಿಹಾರ ನೀಡಲು ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿಸುತ್ತಿದೆ. ಅದೇ ಮಹಾರಾಷ್ಟ್ರಕ್ಕೆ ಹೆಚ್ಚಿನ ನೆರೆ ಪರಿಹಾರ ನೀಡಿದ ಸರ್ಕಾರ ಕರ್ನಾಟಕಕ್ಕೆ ಮಾತ್ರ ಅಲ್ಪ ಪ್ರಮಾಣದಲ್ಲಿ ಪರಿಹಾರ ಘೋಷಿಸಿದೆ. ಇದರಿಂದ ನೆರೆ ಸಂತ್ರಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆರಿಗೆ ತುಂಬಿಸಿಕೊಳ್ಳಲು ಕರ್ನಾಟಕ ಸರ್ಕಾರ ಬೇಕು. ನೆರೆ ಪರಿಹಾರಕ್ಕೆ ಮಾತ್ರ ಕರ್ನಾಟಕ ಬೇಡ ಎನ್ನುವ ಮಲತಾಯಿ ಧೊರಣೆಯನ್ನು ಕೈ ಬಿಡುವಂತೆ ಆಗ್ರಹಿಸಿದ್ದಾರೆ.

ಉತ್ತರ ಕರ್ನಾಟಕ ಮತ್ತೆ ಜಲ ಪ್ರವಾಹದಿಂದ ತತ್ತರ..!

ರಾಜ್ಯದಲ್ಲಿ ಹಿಂಗಾರಿನ ಅಬ್ಬರ ಜೋರಾಗಿದ್ದು, ನದಿಗಳೆಲ್ಲಾ ತುಂಬಿ ಹರಿಯುತ್ತಿವೆ. ನದಿಗಳು ತನ್ನ ಒಡಲಿಗೆ ತೀರದ ಗ್ರಾಮಗಳನ್ನು ಎಳೆದುಕೊಳ್ಳುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದೆರಡು ತಿಂಗಳ ಹಿಂದೆಯಷ್ಟೇ ಹಿಂದೆಂದು ಕಾಣದ ಮಹಾ ಪ್ರವಾಹಕ್ಕೆ ಉತ್ತರ ಕರ್ನಾಟಕವೇ ತತ್ತರಿಸಿದೆ.

ಗ್ರಾಮಗಳ ಸಂಪರ್ಕ ಸೇತುವೆಗಳು, ರಸ್ತೆಗಳು ಪ್ರವಾಹದಲ್ಲಿ ಕತ್ತರಿಸಿಕೊಂಡು, ಕೊಚ್ಚಿಹೋದ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.  ಇದೀಗ ಉತ್ತರ ಕರ್ನಾಟಕಕ್ಕೆ ಮತ್ತೆ  ಜಲ ಕಂಟಕ ಎದುರಾಗಿದೆ. 

ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಂಗಾರಿನ ಅಬ್ಬರ ಜೋರಾಗಿದ್ದು ಜೀವನ ಮತ್ತೆ ಅಸ್ಥವ್ಯಸ್ಥಗೊಂಡಿದೆ. ರಾಜ್ಯದ ಬಹುತೇಕ ಎಲ್ಲಾ ನದಿಗಳು ಸಂಪೂರ್ಣವಾಗಿ ಭರ್ತಿಯಾಗಿ, ಅಪಾಯದ ಮಟ್ಟ ತಲುಪುತ್ತಿವೆ. ಉತ್ತರ ಕರ್ನಾಟಕದ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಭೀಮಾ, ಸೇರಿದಂತೆ ಹಲವು ನದಿಗಳು ಹಿಂಗಾರು ಮಳೆಗೆ ಇದೀಗ ಮತ್ತೆ ಸಂಪೂರ್ಣ ಭರ್ತಿಯಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. 

ಈ ಹಿಂದೆ ಉತ್ತರ ಕರ್ನಾಟಕದಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾಗಳಿಂದ ಪ್ರವಾಹ ಸ್ಥಿತಿ ಎದುರಾಗಿತ್ತು. ಪ್ರವಾಹದ ಒಡಲಿಗೆ ಸಾವಿರಾರು ಗ್ರಾಮಗಳು ಆಹುತಿಯಾಗಿದ್ದವು. ಈ ಪ್ರವಾಹ ಅದೇಷ್ಟೋ ಕುಟುಂಬಗಳ ಬದುಕನ್ನೇ ಸರ್ವನಾಶ ಮಾಡಿತ್ತು. ಬಡ ಜನರ ಮನೆಗಳನ್ನು ಬಿಡದ ಪ್ರವಾಹ ತನ್ನೊಟ್ಟಿಗೆ ಆಹುತಿ ಪಡೆದಿತ್ತು. ಜನ ಬೀದಿಯಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. 

ಒಂದೆಡೆ ಮುರಿದು ಬಿದ್ದಿರುವ ಮನೆಗಳು. ಮನೆ ಅವಶೇಷಗಳನ್ನ ತೆರುವುಗೊಳಿಸಿ ತಾಯಿ ಮಕ್ಕಳು ಮುರುಕಲು ಮನೆಯಲ್ಲೆ ಬದುಕುತ್ತಿರುವ ದೃಶ್ಯ. ಇನ್ನೊಂದೆಡೆ ನದಿ ದಡದಲ್ಲಿರುವ ಗ್ರಾಮಗಳಿಗೆ ಮತ್ತೆ ಮರಳಿ ನಿಧಾನವಾಗಿ ಬದುಕು ಕಟ್ಟಿಕೊಳ್ಳುತ್ತಿರುವ ಗ್ರಾಮಸ್ಥರು. ಅದೇಷ್ಟೋ ಗ್ರಾಮಗಳು ಜಲಸಮಾದಿಯಾಗಿದ್ದವು. ಜನ ತಮ್ಮ ಮನೆಯಲ್ಲಿದ್ದ ದಿನಬಳಕೆ ವಸ್ತುಗಳನ್ನು ಲೆಕ್ಕಿಸದೆ ಜೀವ ಉಳಿಸಿಕೊಳ್ಳಲು ಇಡೀ ಗ್ರಾಮವನ್ನೆ ಖಾಲಿ ಮಾಡಿದ್ರು. ಆದ್ರೆ ಪ್ರವಾಹ ತಗ್ಗಿದ ಬಳಿಕ ಈಗ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಈ ಸ್ಥಿತಿಯಿಂದ ಸಂತ್ರಸ್ಥರು ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವಾಗಲೇ ಗಾಯದ ಮೇಲೆ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳ, ಗ್ರಾಮಗಳಲ್ಲಿನ ಬಡವರ ಇಟ್ಟಿಗೆ ಮಣ್ಣಿನ ಮನೆಗಳು ಪ್ರವಾಹದ ಜೊತೆಗೆ ಕೊಚ್ಚಿಕೊಂಡು ಹೋಗಿದ್ದವು, ಶಾಲೆಗಳು ಪುನಃ ಆರಂಭಿಸಲು ಆಗದಂತೆ ಪ್ರವಾಹದಲ್ಲಿ ನೆನೆದು ತನ್ನ ಮೂಲ ಸ್ವರೋಪವನ್ನೇ ಕಳೆದುಕೊಂಡು ಮಾಸಿ ಹೋಗಿದ್ದವು. ಮನೆ ಇದ್ದವರು ಸ್ವಚ್ಚ ಮಾಡಿಕೊಂಡು ಪುನಃ ಜೀವನ ಆರಂಭಿಸಿದ್ರೇ, ಮನೆ ಇಲ್ಲದವರೂ ಈಗಲೂ ಬಯಲು ಜಾಗದಲ್ಲೆ ಗುಡಿಸಲು ಹಾಕಿಕೊಂಡು, ಸೆಡ್ಡ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿರುವಾಗಲೇ ವರುಣನ ಆರ್ಭಟಕ್ಕೆ ಉತ್ತರ ಮತ್ತೆ ತತ್ತರಿಸಿದೆ.

ಒಂದಲ್ಲಾ, ಎರಡಲ್ಲಾ ಮೂರನೇ ಬಾರಿಗೆ ಕರ್ನಾಟಕ ಜಲಕಂಟಕದಂತಹ ಪರಿಸ್ಥಿತಿ ತುತ್ತಾಗಿದೆ. ಕೃಷ್ಣಾ, ಘಟಪ್ರಭಾಗಳು ತುಂಬಿ ಹರಿಯುತ್ತಿದ್ದು ನದಿ ತೀರದ ಗ್ರಾಮಗಳಿಗೆ, ರೈತನ ಕೃಷಿ ಜಮೀನುಗಳು ಮತ್ತೆ ಜಲಾವೃತಗೊಂಡಿವೆ. ಈ ಸ್ಥಿತಿಯಲ್ಲಿಯೇ ಅನಿವಾರ್ಯವಾಗಿ ಬಿದ್ದಿರುವ ಮುರುಕಲು ಮನೆಯಲ್ಲೆ ಮಕ್ಕಳೊಟ್ಟಿಗೆ ಜೀವನ ಸಾಗಿಸ್ತಾ ಇದ್ದವರಿಗೆ ಗಾಯದ ಮೇಲೇ ಮತ್ತೆ ಪ್ರವಾಹ ಎಂಬ ಬರೆ ಬಿದ್ದಂತಾಗಿದೆ. ಅದು ಒಂದು ಬಾರಿಯಲ್ಲಾ ಮೂರನೇ ಬಾರಿಯ ಪೆಟ್ಟು.

ಇನ್ನು ಮನೆಗಳ ಸ್ಥಿತಿ ಒಂದೆಡೆಯಾದ್ರೆ ಹಸಿದ ಹೊಟ್ಟೆ ತುಂಬಿಸಿಕೊಳ್ಳೋಕು ಜನ ಪರಿತಪ್ಪಿಸ್ತಾ ಇದ್ದಾರೆ. ಜಿಲ್ಲಾಡಳಿತ ಅಲ್ಪಕಾಲದ ಗಂಜಿ ಕೇಂದ್ರಗಳನ್ನು ತೆರೆದು ಮುಚ್ಚಿದ್ದು, ಆಯಿತು. ಗ್ರಾಮಗಳಿಗೆ ವಾಪಸ್ಸು ಬಂದವರಿಗೆ ಕನಿಷ್ಠ ರೇಷನ್ ನೀಡುವ ವ್ಯವಸ್ಥೆಯನ್ನು ಮಾಡಿಲ್ಲ. ಅವರಿವರು ದಾನಿಗಳು ನೀಡಿದ ಅಕ್ಕಿಯನ್ನ ಅನ್ನ ಮಾಡಿಕೊಂಡು ಜೀವನ ನಡೆಸೋ ಸ್ಥಿತಿಯಲ್ಲಿಯೇ ಇನ್ನೂ ಸಂತ್ರಸ್ಥರು ಇದ್ದಾರೆ. ಈ ಮಧ್ಯೆ ಮತ್ತೆ ನೆಲೆ ಕಳೆದುಕೊಳ್ಳುವ ಆತಂಕ ಎದುರಾಗಿದೆ.

ಈ ಮುಂಗಾರಿನ ಅಬ್ಬರಕ್ಕೆ ಅದೇಷ್ಟು ಗ್ರಾಮಗಳ ಮುಖ್ಯರಸ್ತೆಗಳು ಜಲಾವೃತವಾಗಿವೆ, ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಹ ವರುಣನ ಆರ್ಭಟಕ್ಕೆ ಕೊಚ್ಚಿಕೊಂಡು ಹೋಗಿವೆ, ಈಗಲೂ ಆ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಇಲ್ಲ. ಪ್ರವಾಹ ಕಡಿಮೆಯಾಗಿದ್ರು, ನೀರಿನ ಪ್ರಮಾಣ ಮಾತ್ರ ನಿಧಾನಗತಿಯಲ್ಲಿ ಹಿಂದೆ ಸರಿಯುತ್ತಿತ್ತು. ಈ ಸಂದರ್ಭದಲ್ಲಯೇ ಮತ್ತೆ ವರುಣ ಮತ್ತೆ ರುದ್ರನರ್ತನ ಆರಂಭಿಸಿದ್ದಾನೆ.

ಕಳೆದೊಂದು ವಾರದಿಂದ ರಾಜ್ಯದ ವಿವಿಧೆಡೆ ವರುಣಾಸುರ ಎಡೆಬಿಡದೇ ಸುರಿಯುತ್ತಿದ್ದು, ರಾಜ್ಯದ ಎಲ್ಲ ಜಲಾಶಯಗಳು ಮತ್ತೆ ಸಂಪೂರ್ಣ ಭರ್ತಿಯಾಗಿವೆ. ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ನಿರಂತರ ಮಳೆ ಸಾಕಷ್ಟು ಅವಾಂತರ ಸೃಷ್ಟಿಯಾಗಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ದವಸ ಧಾನ್ಯಗಳು ನೀರಿಗೆ ಆಹುತಿಯಾಗಿದೆ. ರಾತ್ರಿ ಇಡೀ ನೀರಿನಲ್ಲೇ ಇದ್ದ ಜನರು, ಮನೆಗಳಿಂದ ನೀರು ಹೊರಹಾಕಲು ಹರಸಾಹಸ ಪಟ್ಟಿದ್ದಾರೆ. ಈ ಬಾರಿ ಹಿಂಗಾರು ತನ್ನ ರೌದ್ರ ದೃಶ್ಯ ತೋರಿಸಿದೆ.

ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಮುಧೋಳ ತಾಲೂಕಿನ ಚಿಚಖಂಡಿ ಗ್ರಾಮದಲ್ಲಿ ಬರುವ ಬೆಳಗಾವಿ-ವಿಜಯಪುರ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಘಟಪ್ರಭಾ ನದಿ ಸೇತುವೆ ಇದೀಗ ಮತ್ತೆ ಜಲಾವೃತಗೊಳ್ಳುವ ಆತಂಕ ಎದುರಾಗಿದೆ. ಈ ಹಿಂದೆ ಸೇತುವೆ 20 ದಿನಗಳವರೆಗೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ಸಂಚಕಾರ ಎದುರಾಗಿತ್ತು. ನೀರಲ್ಲಿ ನೆನೆದ ಪರಿಣಾಮ ಬಿರುಕು ಕೂಡಾ ಕಂಡುಬಂದಿತ್ತು. ಇದೀಗ ಸೇತುವೆಗೂ ಮುಳುಗೊ ಭೀತಿ ಎದುರಾಗಿದೆ.

ಬಾಗಲಕೋಟ ಜಿಲ್ಲೆಯ ಪ್ರದೇಶದ ಎಲ್ಲ ಜಲಾಶಯಗಳು ಭರ್ತಿಯಾಗಿದ್ದು, ಪಟ್ಟದಕಲ್ಲು, ಮುಧೋಳ, ಜಮಖಂಡಿಯ ಮತ್ತೆ ಪ್ರವಾಹ ಸ್ಥಿತಿ ಎದುರಾಗಿದೆ. ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಹಾನಿಯಾಗಿದ್ದು, ಇದುವರೆಗೂ ಭಾರಿ ಗಾತ್ರದ ವಾಹನ ಸಂಚಾರಕ್ಕೆ ಸಂಪರ್ಕ ನಿಷೇಧಿಸಿದೆ.  ಜಿಲ್ಲೆಯ ಹಲವು ಗ್ರಾಮಗಳ ಹಳ್ಳ-ಕೊಳ್ಳಗಳು, ಕೆರೆ-ಬಾವಿ ಭರ್ತಿಯಾಗಿದ್ದು, ಇವುಗಳು ಎಲ್ಲಿವೆ ಎಂಬುವುದೇ ತಿಳಿಯದ ಸ್ಥಿತಿ ಎದುರಾಗಿದೆ. ಒಂದು ಬಾರಿ ಅಲ್ಲದೇ ಎರಡೆರಡು ಬಾರಿ ಜಲ ಪ್ರವಾಹದಿಂದ ರಾಜ್ಯದ ಹಲವು ಜಿಲ್ಲೆಗಳು ತತ್ತರಿಸಿದ್ದವು. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಉತ್ತರ ಕರ್ನಾಟಕದಲ್ಲಿ ಮತ್ತೆ ಹಿಂಗಾರು ಮಳೆಯ ಅಬ್ಬರ ಜೋರಾಗಿದ್ದು, ಮತ್ತೆ ಹಲವು ಜಿಲ್ಲೆಗಳು ಪ್ರವಾಹದ ಭೀತಿಯನ್ನು ಎದುರಿಸುತ್ತಿವೆ.

ಬೆಳಗಾವಿಯ ಘಟ್ಟ್ ಪ್ರದೇಶದಲ್ಲಿ ಸುರಿಯುತ್ತಿವರ ಬಾರಿ ಮಳೆಯಿಂದ  ಖಾನಾಪುರ, ಗೋಕಾಕ್, ಚಿಕ್ಕೋಡಿಯಲ್ಲಿ ಮತ್ತೆ ಜಲಪ್ರವಾಹ. ಗದಗ ಜಿಲ್ಲೆಯ ವಿವಿಧೆಡೆ ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಮಲಪ್ರಭಾ ನದಿಯ ಪ್ರವಾಹಕ್ಕೆ ಹೊಳೆ ಆಂಜನೇಯ ದೇವಸ್ಥಾನ ಕೊಚ್ಚಿಹೋಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್ ಅಣೆಕಟ್ಟೆಗೆ ನೀರು ಬರುತ್ತಿರುವ ಹಿನ್ನಲೆಯಲ್ಲಿ ನದಿಗೆ ನೀರು ಬಿಡುಗಡೆ ಮಾಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ  ರಂಗನತಿಟ್ಟು ಬೋಟಿಂಗ್‍ ನ್ನು ಕೂಡಾ ಸ್ಥಗಿತ್ತಗೊಳಿಸಲಾಗಿದೆ. 

ರಾಯಚೂರು ಜಿಲ್ಲೆಯ ಲಿಂಗಸೂಗುರು, ದೇವದುರ್ಗ ತಾಲ್ಲೂಕಿನ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಪ್ರವಾಹದಿಂದಾಗಿ ತತ್ತರಿಸಿಹೊಗಿದ್ದ ಗ್ರಾಮಗಳಿಗೆ ಮತ್ತೆ ಪ್ರವಾಹದ ಬಿಸಿ ತಟ್ಟಿದಂತಾಗಿದೆ. ಕೃಷ್ಣಾ ನದಿಯ ಹೋರ ಹರಿವಿನ ಮಟ್ಟ ಹೆಚ್ಚಾಗಿದ್ದು, ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಮೀನುಗಾರಿಕೆ ನದಿ ತೀರಕ್ಕೆ ಸುಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಈಗಾಗಲೇ ಪ್ರವಾಹಕ್ಕೆ ಒಳಾಗಿದ್ದ ಪ್ರದೇಶಕ್ಕೆ ಮತ್ತೆ ನೀರು ನುಗ್ಗುವ ಸಾಧ್ಯತೆ ಇದ್ದು, ಅಧಿಕಾರಿಗಳಿಗೆ ಅಲರ್ಟ್ ಆಗಿರುವಂತೆ ಜಿಲ್ಲಾಡಳಿತ ಸೂಚಿಸಿದೆ.

ರಾಜ್ಯದಲ್ಲಿ ಬೆಳಗಾವಿ, ಬಾಗಲಕೋಟೆ, ಹುಬ್ಬಳಿ-ಧಾರವಾಡ ಗದಗ, ಹಾವೇರಿ, ಕೊಪ್ಪಳ, ದಾವಣಗೆರೆ, ರಾಯಚೂರು, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಮಂಡ್ಯ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು, ಗ್ರಾಮಗಳು, ರಸ್ತೆಗಳು ಜಲಾವೃತವಾಗುತ್ತಿದ್ದು, ಅಪಾರ ಪ್ರಮಾಣದ ಹಾನಿ ಉಂಟು ಮಾಡುತ್ತಿದೆ. ಬೆಳಗಾವಿಯಲ್ಲಿ ಇದೀಗ ಈರುಳ್ಳಿಯ ಮಾರಾಟ ಜೋರಾಗಿದ್ದು, ಮತ್ತೊಮ್ಮೆ ರೈತ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಆ್ಯಂಕರ್: ರಾಜ್ಯದಲ್ಲಾದ ಮಹಾ ಪ್ರವಾಹದ ರುದ್ರ ನರ್ತನಕ್ಕೆ ಉತ್ತರ ಕರ್ನಾಟಕ ಅಕ್ಷರಶಃ ದ್ವೀಪವಾಗಿ ಮಾರ್ಪಪಟ್ಟಿದೆ. ಜನರ ಸ್ಥಿತಿ-ಗತಿ ತೀರ ಹದಗೆಟ್ಟಿದೆ. ಇವರ ಸಂಕಷ್ಟಕ್ಕೆ ಸರ್ಕಾರ ಯಾವ ರೀತಿ ಸ್ಪಂದನೆ ನೀಡುತ್ತದೆ ಎಂದು ತಿಳಿಯೋಣ ಒಂದು ಪುಟ್ಟ ವಿರಾಮದ ಬಳಿಕ...

ಇತ್ತ ಮನೆಯು ಇಲ್ಲಾ, ಅತ್ತ ಸರ್ಕಾರದಿಂದ ಪರಿಹಾರವಿಲ್ಲದೇ ಜನ ತುತ್ತು ಅನ್ನಕ್ಕೂ ಗೋಳಾಡುವ ಸ್ಥಿತಿ ಎದುರಾಗಿತ್ತು. ಸರ್ಕಾರ ನಿರಾಶ್ರಿತರ ನೆರವಿಗೆ ಬಂದ್ರು, ಅಧಿಕಾರಿಗಳ ನಿರ್ಲಕ್ಷದಿಂದಾಗಿ ಪರಿಹಾರ ಮಾತ್ರ ಅರ್ಹ ಫಲಾನುಭವಿಗಳಿಗೆ ತಲುಪಿಲ್ಲ ಎನ್ನುವುದು ನೊಂದವರ ಅಳಲು.

ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಇಲ್ಲಿವರೆಗೆ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೃಷ್ಣಾ, ಕಾವೇರಿ, ತುಂಗಭದ್ರಾ, ವೇದಾವತಿ, ಡೋಣಿ ಸೇರಿದಂತೆ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿದ್ದು, ಡ್ಯಾಮ್‍ಗಳೂ ಸಂಪೂರ್ಣ ಭರ್ತಿಯಾಗಿವೆ. ಸಾವಿರಾರು ಮಂದಿ ತಮ್ಮ ನೆಲೆಗಳನ್ನು ಕಳೆದುಕೊಂಡಿದ್ದಾರೆ. ರಾಜ್ಯದ ಬಹುತೇಕ ಭಾಗದಲ್ಲಿ ಹಿಂಗಾರು ಕಣ್ಣೀರಿಗೆ ಕಾರಣವಾಗಿದೆ. ಪ್ರವಾಹದ ನೀರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಕರ್ನಾಟಕಕ್ಕೆ ಪ್ರವಾಹ ಪರಿಹಾರ ನೀಡಲು ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿಸುತ್ತಿದೆ. ಅದೇ ಮಹಾರಾಷ್ಟ್ರಕ್ಕೆ ಹೆಚ್ಚಿನ ನೆರೆ ಪರಿಹಾರ ನೀಡಿದ ಸರ್ಕಾರ ಕರ್ನಾಟಕಕ್ಕೆ ಮಾತ್ರ ಅಲ್ಪ ಪ್ರಮಾಣದಲ್ಲಿ ಪರಿಹಾರ ಘೋಷಿಸಿದೆ. ಇದರಿಂದ ನೆರೆ ಸಂತ್ರಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆರಿಗೆ ತುಂಬಿಸಿಕೊಳ್ಳಲು ಕರ್ನಾಟಕ ಸರ್ಕಾರ ಬೇಕು. ನೆರೆ ಪರಿಹಾರಕ್ಕೆ ಮಾತ್ರ ಕರ್ನಾಟಕ ಬೇಡ ಎನ್ನುವ ಮಲತಾಯಿ ಧೊರಣೆಯನ್ನು ಕೈ ಬಿಡುವಂತೆ ಆಗ್ರಹಿಸಿದ್ದಾರೆ.

ಈ ಹಿಂದೆ ಬಂದ ನೆರೆಯಲ್ಲಿ ಸಂತ್ರಸ್ತರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದರು. ಇಂತಹ ನಿರಾಶ್ರಿತರನ್ನು ಗುರುತಿಸುವಲ್ಲಿ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ. ಸಂಪೂರ್ಣ ಮನೆ ನಾಶವಾದ್ರೆ ಅದನ್ನು `ಎ’ ಗ್ರೇಡ್ ಎಂದು, ಅರ್ಧ ನಾಶವಾಗಿ, ಶೀಥಿಲಗೊಂಡಿದ್ದರೇ ಅದನ್ನು `ಬಿ’ ಗ್ರೇಡ್ ಮತ್ತು ಮನೆಯ ಒಂದು ಬದಿ ಗೋಡೆ ಮಾತ್ರ ಕುಸಿದಿದ್ದು, ಮನೆ ಗಟ್ಟಿಯಾಗಿದ್ರೆ ಅದನ್ನು `ಸಿ’ ಗ್ರೇಡ್ ಆಗಿ ಪರಿಗಣಿಸಿ ಅಲ್ಪಪ್ರಮಾಣದಲ್ಲಿ ಪರಿಹಾರ ಕಲ್ಪಿಸಿತ್ತು.

ಅರ್ಹ ಫಲಾನುಭವಿಗಳನ್ನು ನಿರ್ಲಕ್ಷಿಸಿದ ಅಧಿಕಾರಿಗಳು, ಅವ್ಯವಹಾರದಿಂದಾಗಿ 100% ಮನೆ ನಾಶವಾದರೇ ಎ ಗ್ರೇಡ್ , ಅಲ್ಪ ಹಾನಿಯಾದರೇ ಬಿ ಮತ್ತು ಸಿ ಗ್ರೇಡ್ ನೀಡಬೇಕಿದ್ದ ಸ್ಥಳಿಯ ಪಿಡಿಓ ಹಾಗೂ ತಲಾಟಿಯಿಂದ ಸರಿಯಾಗಿ ಸರ್ವೆ ನಡೆಸದೇ ನಮಗೆ ಅನ್ಯಾಯವೆಸಗಿದ್ದಾರೆಂದು ಸಂತ್ರಸ್ಥರು ಅಳಲು ತೊಡಿಕೊಂಡಿದ್ದು, ಈಗಲೂ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರತಿಭಟನೆ ಮೂಲಕ ಆಗ್ರಹಿಸುತ್ತಲೇ ಇದ್ದಾರೆ. ಎಷ್ಟೆ ಭಾರಿ ಮನವಿ ಮಾಡಿದರೂ ಕೂಡಾ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. 

ವರುಣನ ಅಟ್ಟಹಾಸಕ್ಕೆ ಇದೀಗ ಮತ್ತೆ ಕರ್ನಾಟಕದಲ್ಲಿ ಜಲ ಪ್ರವಾಹದ ನರಕ. ಪ್ರವಾಹದದಿಂದ ತತ್ತರಿಸಿದ್ದವರಿಗೆ ಮತ್ತೆ ಗಾಯದ ಮೇಲೆ ಬರೆಗಳನ್ನು ಎಳೆಯುತ್ತಲೇ ಇದ್ದನೇ ವರುಣರಾಯ. ಇನ್ನೇನು ಅಕ್ಟೋಬರ್ ರಜೆ ಕಳೆದು ಶಾಲೆಗೆ ತೆರಳಬೇಕಿದ್ದ ಮ್ಕಕಳು ಬಾರಿ ಮಳೆಯಿಂದಾಗಿ ಮನೆಯಲ್ಲಿಯೇ ಉಳಿಯುವಂತಾಗಿದೆ. ರಸ್ತೆಗಳಲ್ಲಿ ಮಳೆಯ ನೀರು ತುಂಬಿ ಹರಿಯುತ್ತಿದ್ದು ರಸ್ತೆಗಳು ಯಾವುವು..? ಚರಂಡಿ ಯಾವುದು ಎನ್ನುವುದೇ ತಿಳಿಯುತ್ತಿಲ್ಲ. ಹೀಗಾಗಿ ಶಾಲೆಗಳು ಆರಂಭವಾದ್ರು, ಮಕ್ಕಳು ಶಾಲೆಗೆ ಬರುಲು ಹಿಂದೆಟು ಹಾಕುವಂತಾಗಿದೆ.

ಈ ಹಿಂದೆಯೇ ನೀರಲ್ಲಿ ನಿಂತ ಪ್ರದೇಶಗಳು ಇದೀಗ ಮತ್ತೆ ತುಂಬಿಕೊಂಡಿದ್ದು, ಈ ಭಾರಿ ತಾನಾಗಿಯೇ ನೀರು ಹಿಂದಕ್ಕೆ ಸರಿಯುವುದು ಅನುಮಾನ. ಇದೇ ರೀತಿ ವರುಣರಾಯ ಮುಂದುವರೆದಿದ್ದೇ ಆದಲ್ಲಿ ಮತ್ತೆ ಜಲಕಂಟಕದಲ್ಲಿ ಕರ್ನಾಟಕ ಸಿಕ್ಕು ಒದ್ದಾಡುವುದನ್ನು ತಪ್ಪಿಸಲು ಸಾಧ್ಯವೇ ಇಲ್ಲ.

ಇದೀಗ ರಾಜ್ಯದಲ್ಲಿ ಎಲ್ಲಿ ನೋಡಿದ್ರು ವರುಣದೇವನ ವಿಕಾರ ರೂಪದ ದರ್ಶನವಾಗುತ್ತಿದೆ. ವರುಣನ ಈ ಕಾರ್ಯಕ್ಕೆ ಜನ-ಜಾನುವಾರಗಳ ಪ್ರಾಣಕ್ಕೆ ಕುತ್ತು ಬಂದಿದೆ. ಗ್ರಾಮಗಳ ಸೇತುವೆಗಳು ನೀರಲ್ಲಿ ಮುಳುಗುತ್ತಿವೆ. ಗ್ರಾಮಗಳು ಜಲಾವೃತಗೊಳುತ್ತಿವೆ. ರಸ್ತೆಯ ಮೇಲೆ ಮಳೆ ನೀರು ಹರಿಯುತ್ತಿದ್ದರಿಂದ ರಸ್ತೆಯಲ್ಲಿ ತಗ್ಗು-ಗುಂಡಿಗಳೆಲ್ಲ ಮುಚ್ಚಿದ್ದು, ವಾಹನ ಸಂಚಾರಿಗಳ ಆಹುತಿಗೆ ಕಾಯುತ್ತಿವೆ.

ವಿಕೋಪದಿಂದಾಗಿ ಮನುಷ್ಯ ಅದೆಷ್ಟು ಹಾನಿಯನ್ನು ಅನುಭವಿಸುತ್ತಿದ್ದಾನೆ. ರಾಜ್ಯದ ನದಿಗಳಿಂದ ಭರ್ತಿಯಾದ ಜಲಾಶಯದ ನೀರು ಎಲ್ಲಂದ್ದರಲ್ಲಿ ಹರಿಯುತ್ತಿದೆ. ಆಣೆಕಟ್ಟೆಗಳು ಬಿರುಕು ಬಿಡುತ್ತಿವೆ. ಇನ್ನಾದರೂ ಪ್ರಕೃತಿಯನ್ನು ಮನುಷ್ಯ ಎದುರು ಹಾಕಿ ಕೊಳ್ಳದೆ, ಎಚ್ಚೆತುಕೊಂಡು ಪ್ರಕೃತಿ ನಾಶದಂತಹ ಕಾರ್ಯಕ್ಕೆ ಬ್ರೇಕ್ ಹಾಕುತ್ತಾನ ನೋಡಬೇಕಿದೆ.