ಜನರು ಸಂಕಷ್ಟದಲ್ಲಿರುವ ಸಮಯದಲ್ಲೂ ಪ್ರಚಾರದ ಬ್ಯೂಸಿಯಾದ ಟ್ರಂಪ್

ಜನರು ಸಂಕಷ್ಟದಲ್ಲಿರುವ ಸಮಯದಲ್ಲೂ ಪ್ರಚಾರದ ಬ್ಯೂಸಿಯಾದ ಟ್ರಂಪ್

ಜನರು ಸಂಕಷ್ಟದಲ್ಲಿರುವ ಸಮಯದಲ್ಲಿ ಪ್ರಚಾರದ ಬ್ಯೂಸಿಯಾದ ಟ್ರಂಪ್

ಅಮೆರಿಕ: ಮಹಾಮಾರಿ ಸೋಂಕಿನಿಂದ ʼವಿಶ್ವದ ದೊಡ್ಡಣ್ಣʼ ಅಮೆರಿಕ ಅಕ್ಷರಶಃ ನಲುಗಿ ಹೋಗಿದ್ದು, ಈಗಾಗಲೇ ಅಮೆರಿಕ ತತ್ತರಿಸಿದೆ. ವಿಶ್ವದ ‍ಶ್ರೀಮಂತ ದೇಶ ಅಮೆರಿಕದಲ್ಲಿ ಕೊರೋನಾ ಮಾರಣಹೋಮ ನಡೆಸುತ್ತಿದ್ದು, ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್   ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅಮೆರಿಕನ್ನರಿಗೆ ನೀಡಲಾಗುವ ಚೆಕ್ನಲ್ಲಿಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರನ್ನು ಮುದ್ರಿಸಲು ಖಜಾನೆ ಇಲಾಖೆ ಆದೇಶಿಸಿದೆ ಎನ್ನಲಾಗಿದೆ.

ಬಗ್ಗೆ ಆದೇಶ ಹೊರಡಿಸಿರುವ ಖಜಾನೆ ಇಲಾಖೆ, ಆತಂರಿಕ ಕಂದಾಯ ಸೇವೆ (ಐಆರ್ಎಸ್​) 70 ಮಿಲಿಯನ್ ಅಮೆರಿನ್ನರಿಗೆ 1,200 ಯುಎಸ್ಡಾಲರ್ ಮೌಲ್ಯದಚೆಕ್ವಿತರಿಸಲು ಮುಂದಾಗಿದೆ. ಕಳುಹಿಸುವ ಎಲ್ಲಾ ಚೆಕ್ಗಳನ್ನು ತೆರೆಯುವಾಗ ಅದರ ಎಡ ಭಾಗದಲ್ಲಿ ಡೊನಾಲ್ಡ್ ಜೆ. ಟ್ರಂಪ್  ಹೆಸರು ಕಾಣಬೇಕು ಎಂದು ಆದೇಶ ನೀಡಿರುವುದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಆತಂರಿಕ ಕಂದಾಯ ಸೇವೆ ಐಆರ್ಎಸ್ ಮೊದಲು ಹಲವು ಬಾರಿ ರೀತಿಯ ಚೆಕ್​​ಗಳನ್ನು ವಿತರಿಸಿದೆ. ಆದರೆ, ಚೆಕ್ನಲ್ಲಿ ಇದೇ ಮೊದಲ ಬಾರಿಗೆ ಅಧ್ಯಕ್ಷರ ಹೆಸರು ನಮೂದಿಸಲು ಆದೇಶಿಸಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಐಆರ್ಎಸ್ ನಡೆಗೆ ಅಮೆರಿಕಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜನರು ಸಂಕಷ್ಟದಲ್ಲಿರುವ ಸಮಯದಲ್ಲಿ ಪ್ರಚಾರ ಗಿಟ್ಟಿಸಲು ಮುಂದಾಗಿರುವ ಅಮೆರಿಕ ಅಧ್ಯಕ್ಷರ ನಡೆ ತರವಲ್ಲ ಎಂಬ ಮಾತು ಸಾರ್ವಜನಿಕ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.