ಟೇಬಲ್ ಟೆನಿಸ್ : ಭಾರತದ ಪಾಲಿಗೆ ಐದು ಚಿನ್ನ, ಮೂರು ಬೆಳ್ಳಿ

ಟೇಬಲ್ ಟೆನಿಸ್ : ಭಾರತದ ಪಾಲಿಗೆ ಐದು ಚಿನ್ನ, ಮೂರು ಬೆಳ್ಳಿ

ಕಠ್ಮಂಡುವಿನಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯನ್ ಕ್ರೀಡಾಕೂಟದ ಟೇಬಲ್ ಟೆನಿಸ್ ವಿಭಾಗದಲ್ಲಿ ಭಾರತವು ಎರಡು ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ಗೆದ್ದುಕೊಂಡಿದೆ.

ಮಂಗಳವಾರವೇ ಮೂರು ಚಿನ್ನ ಗೆದ್ದಿದ್ದ ಭಾರತ, ಬುಧವಾರ ಮತ್ತೆರಡು ಚಿನ್ನದ ಪದಕಗಳನ್ನು ಪಡೆಯುವ ಮೂಲಕ, ಒಟ್ಟಾರೆಯಾಗಿ ಐದು ಸ್ವರ್ಣ ಪದಕ ಹಾಗೂ ಮೂರು ಬೆಳ್ಳಿ ಸೇರಿದಂತೆ ಒಟ್ಟು ಒಂಬತ್ತು ಪದಕ ಪಡೆದುಕೊಂಡಿದೆ.

ಪುರುಷರ ಡಬಲ್ಸ್ ವಿಭಾಗದಲ್ಲಿ ಹರ್ಮೀತ್ ದೇಸಾಯಿ ಮತ್ತು ಆ್ಯಂಥೋನಿ ಅಮಲ್‌ರಾಜ್ ಜೋಡಿ 8-11, 11-7, 11-7, 11-5, 8-11. 12-10 ಅಂತರದಲ್ಲಿ ಸನಿಲ್ ಶೆಟ್ಟಿ ಮತ್ತು ಸುಧಾಂಶು ಗ್ರೋರೋವರ್ ಜೋಡಿಯನ್ನು ಮಣಿಸಿ ಚಿನ್ನ ಮುಡಿಗೇರಿಸಿಕೊಂಡಿತು. ಇನ್ನು ಮಹಿಳೆಯರ ಡಬಲ್‌ಸ್ ವಿಭಾಗದಲ್ಲಿ ಮಾಧುರಿಕಾ ಪಟ್ಕರ್ ಮತ್ತು ಶ್ರೀಜಾ ಅಕುಲಾ ಜೋಡಿ 2-11, 11-8, 11-8, 11-6, 5-11, 11-5 ಅಂತರದಲ್ಲಿ ಸುತೀರ್ಥ ಮುಖರ್ಜಿ ಮತ್ತು ಅಯಿಕಾ ಮುಖರ್ಜಿ ವಿರುದ್ಧ ಗೆಲುವು ಪಡೆದು ಚಿನ್ನದ ಪದಕ ಪಡೆದುಕೊಂಡಿತು.