ಶಂಕರ್ ನಾಗ್ ನೆನಪಿನಲ್ಲಿ :ಆಟೋರಾಜನಿಗೆ 65 ನೇ ಹುಟ್ಟುಹಬ್ಬ

ಶಂಕರ್ ನಾಗ್ ನೆನಪಿನಲ್ಲಿ :ಆಟೋರಾಜನಿಗೆ 65 ನೇ ಹುಟ್ಟುಹಬ್ಬ

ಬೆಂಗಳೂರು:ಕನ್ನಡ ಚಿತ್ರರಂಗದ ಸಕಲ ಕಲಾವಲ್ಲಭ ಎಂದರೇ ಪಕ್ಕನೇ ನೆನಪಾಗುವುದು ಶಂಕರ್ ನಾಗ್ ಹೆಸರು, ಅವರಿಗೆ ಇಂದು 65 ನೇ ಜನ್ಮದಿನದ ಸಂಭ್ರಮ.

ಇವರು 9 ನವೆಂಬರ್ 1954 ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದರು, ಇವರ ತಂದೆ ಹೊನ್ನಾವರದ ನಾಗರಕಟ್ಟೆಯ ಸದಾನಂದ ,ಬಾಲ್ಯದ ನಂತರ ವಿದ್ಯಾಬ್ಯಾಸಕ್ಕಾಗಿ ಮುಂಬೈಗೆ ತೆರಳಿದ ಶಂಕರ್ ನಾಗ್ ,ಅಲ್ಲಿನ ಮರಾಠಿ ಚಿತ್ರಮಂದಿರದ ಕಡೆಗೆ ಆಕರ್ಷಿತರಾಗಿ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತ ಅದರಲ್ಲಿಯೇ ತೀವ್ರವಾಗಿ ತೊಡಗಿಕೊಂಡರು. ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದರು. ನಂತರ ಗಿರೀಶ್ ಕಾರ್ನಾಡರ ‘ಒಂದಾನೊಂದು ಕಾಲದಲ್ಲಿ’ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರದ 12 ವರ್ಷಗಳಲ್ಲಿ ಕನ್ನಡದ ಸುಮಾರು 90ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು.

ಇವರು ಒಬ್ಬ ನಟ,ನಿರ್ದೇಶಕ ಮಾತ್ರವಲ್ಲ,ತಂತ್ರಜ್ಞನೂ ಕೂಡ, ಮಾನವೀಯತೆಯ ಸಾಕಾರಮೂರ್ತಿಯಾಗಿದ್ದವರು. ಇವರು ಬೆಂಗಳೂರಿನಲ್ಲಿ ತಲೆಯೆತ್ತುತ್ತಿರುವ ಮೆಟ್ರೋ ರೈಲಿನ ಕನಸನ್ನು ಅಂದೇ ಕಂಡ ಮಹಾನ್ ಕನಸುಗಾರ.