ಹೇಳತೀರದು ಪ್ರಶಸ್ತಿ ಬರದ ಸಿನಿಮಾದವರ ಪಾಡು: ರಂಗನಾಯಕಿ ಸುತ್ತ ವದಂತಿಗಳ ಗೂಡು

ಗೋವಾದಲ್ಲಿ ನಡೆಯುವ ಚಿತ್ರೋತ್ಸವದ ಪನೋರಮಾಕ್ಕೆ ದಯಾಳ್ ಪದ್ಮನಾಭ್ ನಿರ್ದೇಶನದ `ರಂಗನಾಯಕಿ' ಸಿನಿಮಾ ಆಯ್ಕೆಯಾಗಿರುವ ಕನ್ನಡದ ಏಕೈಕ ಚಿತ್ರ ಆದರೆ ಇಡೀ ವಿಶ್ವದಲ್ಲೇ ಪೂರ್ತಿ ಚಿತ್ರವನ್ನು ತ್ರಿಡಿಯಲ್ಲಿ ತಯಾರಿಸಿದ್ದ ಕುರುಕ್ಷೇತ್ರ ಸೇರಿದಂತೆ ಹಲವು ಸಿನಿಮಾಗಳನ್ನು ಪರಿಗಣಿಸಲ್ಲಿಲ್ಲವೇಕೆ ? ಎಂಬುದೇ ಈಗ ಭಾರಿ ಸುದ್ದಿಯಾಗಿದೆ.

ಹೇಳತೀರದು ಪ್ರಶಸ್ತಿ ಬರದ ಸಿನಿಮಾದವರ ಪಾಡು: ರಂಗನಾಯಕಿ ಸುತ್ತ ವದಂತಿಗಳ ಗೂಡು

ಗೋವಾದಲ್ಲಿ ನಡೆಯುವ ಚಿತ್ರೋತ್ಸವದ ಪನೋರಮಾಕ್ಕೆ ದಯಾಳ್ ಪದ್ಮನಾಭ್ ನಿರ್ದೇಶನದ `ರಂಗನಾಯಕಿ' ಸಿನಿಮಾ ಆಯ್ಕೆಯಾಗಿರುವ ಕನ್ನಡದ ಏಕೈಕ ಚಿತ್ರ. ಇಡೀ ವಿಶ್ವದಲ್ಲೇ ಪೂರ್ತಿ ಸಿನಿಮಾವನ್ನ ತ್ರಿಡಿಯಲ್ಲೇ ತಯಾರಿಸಿರುವ `ಕುರುಕ್ಷೇತ್ರ' ಸೇರಿದಂತೆ ಹಲವು ಚಿತ್ರಗಳನ್ನ ಇಲ್ಲಿ ಪರಿಗಣಿಸಿಲ್ಲವೇಕೆ? 

ಯಾವುದಕ್ಕೇ ಪ್ರಶಸ್ತಿ ಕೊಟ್ಟರೂ  ಕಷ್ಟ, ಕೊಡದಿದ್ದರೂ ಕಷ್ಟವೆಂಬ  ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದಿರುವ ಸಿನಿಮಾ ರಂಗದಲ್ಲೀಗ ಭಾರೀ ಭಾರೀ ಸುದ್ದಿಗಳು ಸುಳಿದಾಡುತ್ತಿವೆ.

ಬಿಡುಗಡೆಯಾದ ಮೂರು ಚಿತ್ರಗಳು 120 ಕೋಟಿ ರು ಸಂಪಾದಿಸಿವೆ  ಅಂದ ಮೇಲೆ ರಾಷ್ಟ್ರದ ಆರ್ಥಿಕತೆ ಸದೃಢವಾಗಿದೆ ಎಂದರ್ಥವಲ್ಲವೇ ಎಂದು ಕೇಂದ್ರ ಸಚಿವ ರವಿಶಂಕರ್ ಹೇಳಿಕೊಳ್ಳುತ್ತಾ ಕೂತಿದ್ದರೆ, ಇಡೀ ರಾಷ್ಟ್ರದಾದ್ಯಂತ ತಳ್ಳುವ ಗಾಡಿಯಿಂದ ಹಿಡಿದು ದೊಡ್ಡದೊಡ್ಡ ಸ್ಟಾರ್ ಹೋಟೆಲ್‍ಗಳಲ್ಲಿ ದಿನನಿತ್ಯ ಬಿಕರಿಯಾಗುವ ಆಹಾರ ಪದಾರ್ಥದಿಂದ ಕೋಟ್ಯಂತರ ರುಪಾಯಿ ಬರುತ್ತೆ ಇದರ ಆಧಾರದ ಮೇಲೆ ನಮ್ಮಲ್ಲಿ ಬಡತನವೇ ಇಲ್ಲ, ಆರ್ಥಿಕ ದರ ಕುಸಿದಿಲ್ಲ ಎನ್ನಲಾದೀತೇ ಎಂಬ ವಾದಗಳನ್ನೂ ಮಂಡಿಸಬಹುದು

ಇಡೀ ವಿಶ್ವದಲ್ಲಿ ಭಾರತೀಯ ಸಿನಿಮಾ ರಂಗ ದೊಡ್ಡ ಉದ್ದಿಮೆಯಾಗಿ ಬೆಳೆದಿರುವುದೇನೋ ನಿಜ. ಆದರೆ ಒಟ್ಟಾರೆ ರಾಷ್ಟ್ರೀಯ ಉತ್ಪನ್ನದಲ್ಲಿ ಇದರ ಪಾಲು ಶೇ.2 ರಷ್ಟಕ್ಕೂ ಇಲ್ಲ. ಅಂಥದ್ದರಲ್ಲಿ ಮೂರು ಸಿನಿಮಾಗಳ ಒಂದು ದಿನದ ಗಳಿಕೆಯನ್ನೇ ರಾಷ್ಟ್ರದ ಆರ್ಥಿಕತೆಯ ಸಬಲತೆಯನ್ನ ಪ್ರತಿಬಿಂಬಿಸಲು ಬಳಸುತ್ತಿರುವುದು ನಗೆಪಾಟಲಿನದು. ಅಂದಹಾಗೆ ಕೇಂದ್ರ ಸಚಿವ ಹೇಳಿರುವಂತೆ ಈ ಮೂರು ಚಿತ್ರಗಳೇ 120ಕೋಟಿ ಬಾಚಿರುವ ಮೊದಲ ಚಿತ್ರಗಳಲ್ಲ. ಬಾಹುಬಲಿ ಎರಡನೇ ಭಾಗ ಒಂದೇ ದಿನದಲ್ಲಿ 112 ಕೋಟಿ ಸಂಗ್ರಹಿಸಿಕೊಂಡಿತ್ತು.

ಈ ವಿಚಾರವಿರಲಿ, ಸಿನಿಮಾಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ಪ್ರಶಸ್ತಿಗಳನ್ನ ಕೇಂದ್ರವೂ ಕೊಡುತ್ತೆ, ರಾಜ್ಯಗಳೂ ಕೊಡುತ್ತವೆ.  ಈ ಸಲ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಕನ್ನಡ ಸಿನಿಮಾಗಳಲ್ಲಿ `ನಾತಿ ಚರಾಮಿ'ಯೂ ಇದ್ದು, ಈ ಸಿನಿಮಾದ ಕೆಲಸ ಕಾರ್ಯಗಳು ಯಾರ ಸ್ಟುಡಿಯೋದಲ್ಲಿ ಆಗಿತ್ತೋ, ಅದರ ಮಾಲೀಕನೇ ಆಯ್ಕೆ ಸಮಿತಿಯಲ್ಲಿದ್ದು, ಇದೇ ಸಿನಿಮಾಕ್ಕೆ ಪ್ರಶಸ್ತಿ ಬರುವಂತೆ ಮಾಡಿದ್ದಾರೆ. ಇದು ನಿಯಮಬಾಹಿರ ಎಂದು ಇನ್ನೊಬ್ಬ ನಿರ್ದೇಶಕ ದಯಾಳ್ ಪದ್ಮನಾಭ ನ್ಯಾಯಾಲಯದ ಬಾಗಿಲು ತಟ್ಟಿರುವುದು ಹಳೇ ಕತೆ.

ಈಗ ಗೋವಾದಲ್ಲಿ ನಡೆಯುವ ಚಿತ್ರೋತ್ಸವದ ಪನೋರಮಾಕ್ಕೆ ದಯಾಳ್ ಪದ್ಮನಾಭ್ ನಿರ್ದೇಶನದ `ರಂಗನಾಯಕಿ' ಸಿನಿಮಾ ಆಯ್ಕೆಯಾಗಿರುವ ಕನ್ನಡದ ಏಕೈಕ ಚಿತ್ರ. ಇಡೀ ವಿಶ್ವದಲ್ಲೇ ಪೂರ್ತಿ ಸಿನಿಮಾವನ್ನ ತ್ರಿಡಿಯಲ್ಲೇ ತಯಾರಿಸಿರುವ `ಕುರುಕ್ಷೇತ್ರ' ಸೇರಿದಂತೆ ಹಲವು ಚಿತ್ರಗಳನ್ನ ಇಲ್ಲಿ ಪರಿಗಣಿಸಿಲ್ಲವೇಕೆ ಎಂಬುದೇ ಒಂದಕ್ಕೊಂದನ್ನ ಗಂಟು ಹಾಕುವ ಸುದ್ದಿಗಳನ್ನ ತೇಲಿಬಿಡಲಾಗಿದೆ.

ಗಾಂಧಿ ನಗರದ ಹಲವು  ಪ್ರಶಸ್ತಿ, ಪನೋರಮಾ ವಂಚಿತರ ಗುಂಪೀಗೆ  ದಯಾಳ್ ರಾಷ್ಟ್ರ ಪ್ರಶಸ್ತಿ ವಿವಾದವನ್ನ ನ್ಯಾಯಾಲಯದ ಮುಂದೆ ಕೊಂಡೊಯ್ದಿದ್ದು, ಅದನ್ನ ವಾಪಸ್ಸು ಪಡೆಯಬೇಕು ಎಂಬ ಮನವೊಲಿಕೆಗಾಗಿ ಪನೋರಮಾಗೆ ಇವರ ಸಿನಿಮಾ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿಸುತ್ತಿದೆ.

ಯಾವುದೆ ಆಯ್ಕೆ ಸಮಿತಿಗಳಿಗೂ ಹಿತಾಸಕ್ತಿ ಗುಂಪಿನ ಸದಸ್ಯನನ್ನೇ ಕಳುಹಿಸಿಕೊಟ್ಟು, ಅವರ ಗುಂಪಿನ ಸಿನಿಮಾಕ್ಕೇ ಪ್ರಶಸ್ತಿ ಸಿಗುವಂತೆ ನೋಡಿಕೊಳ್ಳುವ ಪರಿಪಾಠವಿದೆ. ಇದಕ್ಕೆ ನಿರ್ದಿಷ್ಟವಾದ ನಿಯಮಗಳೇ ಇಲ್ಲ ಎಂಬ ಆರೋಪ ಅನೇಕ ವರ್ಷಗಳಿಂದ ಇದ್ದರೂ, ಕಿಮ್ಮತ್ತು ಸಿಕ್ಕಿಲ್ಲ. ಈಗ ಪನೋರಮಾ ವಂಚಿತರ ಗುಂಪು  ದಯಾಳ್ ಪದ್ಮನಾಭ್ ವಿರುದ್ದ ಸುದ್ದಿಗಳನ್ನ ಹಬ್ಬಿಸುತ್ತಿರುವುದು ಮಾತ್ರವಲ್ಲ, ಪನೋರಮಾ ಆಯ್ಕೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆಹೋಗುವ ಚಿಂತನೆ ಯಲ್ಲಿದೆ.

ಅಂದಹಾಗೆ ನಿಗದಿತ ಸಮಯಕ್ಕಿಂತ ಎಂಟು ತಿಂಗಳು ಮೀರಿ ಹೋಗಿದ್ದರೂ, ರಾಜ್ಯ ಪ್ರಶಸ್ತಿಗಳ ಪ್ರಕಟಣೆಯೇ ಆಗಿಲ್ಲ. ಇನ್ನೂ ಮೂರ್ನಾಲ್ಕು ದಿನ ಆಯ್ಕೆ ಸಮಿತಿ ಸಿನಿಮಾ ನೋಡುವುದು ಬಾಕಿ ಇದ್ದು, ಇನ್ನೆರಡು ತಿಂಗಳು ಉರುಳಿದರೆ 2019 ರ ಸಾಲಿನ ಸಿನಿಮಾಗಳು ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿ ಮುಂದೆ ಬರಲಿವೆ. ಅಂಥದ್ದರಲ್ಲೂ ಕಳೆದ ವರ್ಷದ ಪ್ರಶಸ್ತಿಗಳನ್ನ ಇನ್ನೂ ಘೋಷಿಸಿಲ್ಲ. ಸಹಾಯಧನ ಸಮಿತಿಯದ್ದೂ ಸದ್ದಿಲ್ಲ. ಈ ಹಿನ್ನೆಲೆಯಲ್ಲೇ ಪ್ರಶಸ್ತಿ ರದಿದ್ದವರ ಗುಂಪು ಸಕ್ರಿಯಗೊಂಡು ಕಾರ್ಯಾಚರಣೆ ನಡೆಸುತ್ತಿದೆ, ಇದು ಖಚಿತವಾಗಿಯೂ ರಾಜ್ಯ ಪ್ರಶಸ್ತಿಗಳಲ್ಲೂ ವಿವಾದ ಹುಟ್ಟುಹಾಕುತ್ತೆ ಎನ್ನುವಂತೆಯೇ ಇವೆ.