“ಸರ್ಕಾರಿ ಆಸ್ಪತ್ರ್ಯಾಗ್ ಬಿಲ್ಡಿಂಗ್ ಇದ್ರ, ಕಾಟ್ ಇರೋದಿಲ್ಲಾ !,  ಕಾಟ್ ಇದ್ರ ಔಷಧಿ ಇರೋದಿಲ್ಲಾ ! ಈಮೂರು ಇದ್ರ  ಡಾಕ್ಟರ್ ಇರೋಂಗಿಲ್ಲಾ....! 

ನಿಮ್ಮದೇನ್ ಮಾಹಾ ಬಿಡ್ರೀ..., "ನಿಮ್ಮ ಸಿದ್ದ್ರಾಮಣ್ಣ ಹೋಗಿ ಕೈ ಪಕ್ಷದಪರವಾಗಿ ಲುಂಗಿ ಮ್ಯಾಲೆ ಕಟಿಗೆಂಡ್  ಪ್ರಚಾರ ಮಾಡಿದ್ರು ಹೆಚ್ಚ್ಗಿ ಸೀಟು ಬಂದಿಲ್ಲಾ?. ನಮ್ಮ ಪಕ್ಷ ಹೆಚ್ಗಿ ಸೀಟು ತಗೊಂಡು ಮಾನಾ-ಮರ್ಯಾದಿ ಉಳ್ಸಿಕೊಂಡೈತಿ"?

“ಸರ್ಕಾರಿ ಆಸ್ಪತ್ರ್ಯಾಗ್ ಬಿಲ್ಡಿಂಗ್ ಇದ್ರ, ಕಾಟ್ ಇರೋದಿಲ್ಲಾ !,  ಕಾಟ್ ಇದ್ರ  ಔಷಧಿ ಇರೋದಿಲ್ಲಾ ! ಈಮೂರು ಇದ್ರ  ಡಾಕ್ಟರ್ ಇರೋಂಗಿಲ್ಲಾ....! 

ಯಾಕೋ ಬಸಣ್ಣಾ ಹಿಂಗ್ಯಾಕ್ ಕುಂತೀ....?, "ಮುಖಾನ ಹಿಂಗ್ಯಾಕ್ ಸುಟ್ಟ ಮುಳಗಾಯ ಹಂಗ್ ಮಾಡಿಕೊಂಡ್, ಅದು ಹೊಂಡದ ದಂಡಿಮ್ಯಾಗ್ ಕುಂತಿಯಲ"್ಲ...! "ಏನಾತೋ ಅಂತಾದ್ದು?. "ಹಟ್ಟಿ ಹಬ್ಬಾ ಜೋರ್!. ಎಲ್ಲಾರು ಅರ್ವಿ ಅಂಗಡ್ಯಾಗ್ ಚೊಣ್ಣ-ಅಂಗಿ ತಗೊಳ್ಳಾಕ ಹತ್ಯಾರ್!, ನಿಂದೇನ್ಪಾ ಹಬ್ಬದಾಗ ಗದ್ಲ"?. ನಿನ್ನ ಮನಿಕಡಿಗೆ ಹೋಗಿದ್ದೆ, ನಿನ್ನ ಹೆಂಡ್ತೀ ಲಕ್ಷ್ಮವ್ವ ಮಂಜಾನೆ ಜಗ್ಳಾ  ಮಾಡಿಕೊಂಡು ಚಾ ಕುಡಿಲಿಲ್ಲದಂಗ್ ಹಂಗ್ ಹೋಗ್ಯಾರ್ ನೋಡ್ರೀ ಅಂದ್ಲು, ಊರೆಲ್ಲಾ ಹುಡ್ಕಿದಮ್ಯಾಲ್ ನಿ ಇಲ್ಲೆ ಕುಂತೀ.. 

ಏನ್ ಅಂತ್ ಹೇಳೋದ್ರೀ ಕಾಕಾ, "ಇಲೇಕ್ಷನ್ ಒಳ್ಗ ನಮ್ಮ ಪಕ್ಷಕ್ಕ ಸಿಕ್ಕಾಪಟ್ಟೆ ಸೀಟು ಬರ್ತಾವು ಅಂತ್ ಅನಕೊಂಡಿದ್ದೆ"!. "ಆದ್ರ ರಿಜಲ್ಟ್ ನೋಡ್ರಿದ್ರ ಯಾಕೋ ಯಡವಟ್ಟಾಗೇತಿ ಅಂತ್ ಅನಸಾಕ ಹತ್ತೇತಿ"!. "ಮಹಾರಾಷ್ಟ್ರಾದಾಗ್ ತುದಿಕುಳ್ಳ್ಸಿ ನಮ್ಮ ಪಕ್ಷ ಆರ್ಸಿ ಬಂದೈತಿ", "ಹರ್ಯಾಯಾಣದಾಗ ಹರಕಂಡ ಹೋಗೇತಿ"!, "ಪುಣ್ಯಕ್ಕ ಜೆಬಿಸಿ ಪಕ್ಷದವ್ರು ನಮ್ಮ ಪಕ್ಷದ ಜೊತಿ ಕೂಡಾಕ ಒಪಿಗೊಂಡಿದ್ರಿಂದಾ ಹರ್ಯಾಣದಾಗ ಹೆಂಗೋ ನಮ್ಮ ಪಕ್ಷ ಬಚಾವ್ ಆಗೇತಿ"!.  "ಮಹಾರಾಷ್ಟ್ರಾದಾಗೂ ಶಿವಸೇನಾದ ಮುಂದ್ ನಮ್ಮ ಪಕ್ಷ ತಗ್ಗಿ-ಬಗ್ಗಿ ನಡಬೇಕಾಗೇತಿ, ಅದ್ಕ ಮುಂದ ಹೆಂಗ್ಪಾ ಅಂತ್ ಯೋಚ್ನಾ ಮಾಡಕಾ ಹತ್ತಿದ್ದೆ ನೋಡ್ರೀ"..!

"ಅಲ್ಲಲೇ ತಮ್ಮಾ, ಅಜ್ಜಿಗೆ ಅರ್ವಿ ಚಿಂತ್ಯಾದ್ರ..... ಮೊಮ್ಮಗಳಿಗೆ ಅದ್ಯಾರದ್  ಚಿಂತಿ ಅಂತ್" ಅನ್ನೊಹಂಗಾತು ನೋಡ ನಿನ್ನ ಬಾಳೇವು". "ನಾ ಏನೋ ತಲಿ ಹೋಗುವಂತಾ ವಿಷ್ಯಾ ಇರಬಹ್ದು ಅಂತ್ ಅನಕಂಡಿದ್ದೆ"!, "ನಿನ್ನ ಚಿಂತಿ ನೋಡಿದ್ರ ಬ್ಯಾರೇನ ಐತಿ..... ಬದ್ಕಿಂದಲ್ಲಾ .... ಬಂದಿದ್ದಲ್ಲಾ... ಬಾಳೆದ್ದಲ್ಲಾ.... ಹೋಗ್ಲೇ ಹೋಗ್. ಊರ್ ಸುದ್ದಿ ತಗೊಂಡು ಮುಲ್ಲಾ ಸೊರಗ್ದ್ನಿಂತ್" ಹಂಗಾತು ನಿನ್ನ ಬಾಳೆ. "ಅಲ್ಲೋ ಮಹಾರಾಷ್ಟ್ರಕ್ ನಿಮ್ಮ ಸಿಎಂ ಯಡೆಯೋರ್ಸಪ್ಪ ಹೋಗಿ ಚುನಾವಣಾ ಭಾಷ್ಣಾಮಾಡಿ ನಮ್ಮಪಕ್ಷದ ಅಭ್ಯರ್ಥಿಗಳನ್ನ ಗೆಲ್ಸಿದ್ರ ಆಲಮಟ್ಟಿಂದ್ ಮಹಾರಾಷ್ಟ್ರಾಕ್ ನೀರ್ ಬಿಡ್ತನಿ ಅಂತ್  ಹೇಳಿತ್ತೂ"!. ಯಾಕ್ ನೀರ ಬಿಡೋ ಭರವಸೆ ಕೆಲ್ಸಾ ಮಾಡಲಿಲ್ಲನೂ?. ಯಡವಟ್ಟ ಹೇಳ್ಕಿ ನೀಡಿ ನಾಡಿನ ಜನ್ರ ಕಡಿಂದ್ ಯಡವಟ್ಟಪ್ಪ  ಅಂತ್ ಕರ್ಸಿಗೊಂಡಿತ್ತಲ್ಲ!.  ಯಾಕ್ ಭಾಷ್ಣಾ ಕೈಕೊಟ್ಟತನು..?.

ಹೌದ್ರೀ ...., ಆದ್ರ, ನೀರ್ ಬಿಡೋ ಹೇಳ್ಕಿಗೂ ಇದ್ಕು ಸಂಬಂಧ ಇಲ್ಲಾ ಬಿಡ್ರೀ ಕಾಕಾ!

ಅದೇಂಗ್ ಹೇಳ್ತಿಯೋ?,  "ನಿಮ್ಮ ಸಿಎಂ ಭಾಷ್ಣಾ ಮಾಡಿದ್ದ ಕ್ಷೇತ್ರದಾಗ ಬಿಜೆಪಿ ಸೋತ್ ಸುಣ್ಣ್ಗಾಗೇತಿ"!.  "ಯಡೆಯೋರ್ಸಪ್ಪನ್ ನೋಡಿ ಜನಾ ಓಟ ಹಾಕಿಲ್ಲಾ ಅಲ್ಲೆ !, ಈ ಜೋಳ್ಳ ಭರವಸೆ, ಈ ಹಾರಾಟ-ಚೀರಾಟ, ಈ ರಾಜಕೀಯದ್  ಡೊಂಬರಾಟ್ ಬಾಳಾದಿನಾ ನಡೆಯಂಗಿಲ್ಲಾ ಅನ್ನೋದನ್ನ್ ಈಚುನಾವಣೆ ಕರೆ ಮಾಡ್ಸೇತೆ ನೋಡು"?. "ಅಲ್ಲಾ ಅದೇನ್ ಭಾಷ್ಣಾ, ಅದೇನು ಆರೋಪ-ಪ್ರತ್ಯಾರೋಪ, ಈ ಭಾಷ್ಣಾದಾಗ ಆಕಾಶ ತೋರ್ಸೋ ಮಂದಿಗೆ ಜನ ಮುಟ್ಟಿ ನೋಡಿಕೊಳ್ಳೋಹಂಗ್ ಬುದ್ದಿ ಕಲ್ಸ್ಯಾರ್ ನೋಡು!". 

ನಿಮ್ಮದೇನ್ ಮಾಹಾ ಬಿಡ್ರೀ..., "ನಿಮ್ಮ ಸಿದ್ದ್ರಾಮಣ್ಣ ಹೋಗಿ ಕೈ ಪಕ್ಷದಪರವಾಗಿ ಲುಂಗಿ ಮ್ಯಾಲೆ ಕಟಿಗೆಂಡ್  ಪ್ರಚಾರ ಮಾಡಿದ್ರು ಹೆಚ್ಚ್ಗಿ ಸೀಟು ಬಂದಿಲ್ಲಾ?. ನಮ್ಮ ಪಕ್ಷ ಹೆಚ್ಗಿ ಸೀಟು ತಗೊಂಡು ಮಾನಾ-ಮರ್ಯಾದಿ ಉಳ್ಸಿಕೊಂಡೈತಿ"?.

"ಮಾನಾ-ಮರ್ಯದೆ ಅದೇನ್ ಗಂಗಮ್ಮನ ಚಾ ಅಂಗಡ್ಯಾಗ ಸಿಗೋ ಮೀರ್ಚಿ-ಮಂಡಕ್ಕಿ ಅಂತ್ ತಿಳ್ಕಂಡಿಯೇನ್" ಮಂಗ್ಯಾನಮಗ್ಮ.  "ಸುಳ್ಳ ಹೇಳ್ಯಾಕು ಒಂದ್ ಮೀತಿ ಇರ್ತತೈತಿ"!. "ಅತಿ ಸುಳ್ಳ ಹೇಳಿ ಜನ್ರನ್ ಹಗ್ಲೇಲ್ಲಾ ಮೋಸಾ ಮಾಡಾಕ ಸಾಧ್ಯ ಇಲ್ಲೋ".....?. ಆದ್ರ , ಸಿದ್ದ್ರಾಮಣ್ಣ ಹೋಗಿ ಪ್ರಚಾರ ಮಾಡಿಬಂದ್ ಕ್ಷೇತ್ರದಾಗ ಕೈ ಪಾರ್ಟಿ ಕ್ಯಾಂಡಿಡೇಟು ಆರ್ಸಿ ಬಂದೈತಿ ನೋಡು"!. 

 "ಅಲ್ಲೆ ಅಷ್ಟ ಆರ್ಸಿ ಬಂದ್ರ ಏನ್ ಪ್ರಯೋಜ್ನಾ ಇಲ್ರೀ"..., "ಬ್ಯಾರೇ ಕಡಿಗೆ ನಿಮ್ಮ ಕೈ ನಮ್ಮ  ಕಮಲದಹೂವಿನ ಹೊಡ್ತಕ್ಕ್  ಮುದಿಡಿಕೊಂಡೈತಿ". "ಪೈಲ್ವಾನ್ ಮಣ್ಣ ಮುಕ್ಕಿದ್ರೂ ಮೀಸಿ ಮಣ್ಣಾಗಲಿಲ್ಲಾ ಅನ್ನೋಹಂಗ್ ಆಗೇತಿ ನೋಡ್ರೀ ನಿಮ್ಮ ಪಕ್ಷದ ಸ್ಥಿತಿ". ಹರ್ಯಾಣದಾಗ ಹೆಚ್ಚ್ ಸೀಟು ತಗೋಂಡ್ರು ನಿಮ್ಮ ಪಕ್ಷದ ಗತಿ ಹರ್ಯಾಣಾದಾಗ ಹರೋಹರಾ ಆಗೇತಿ, ಮಹಾರಾಷ್ಟ್ರಾದಾಗೂ ಹಂಗ್ ಆಗೇತಿ"....?.

"ಆತ್ ಬಿಡೋ ಕೈ ಪಕ್ಷ -ಕಮಲ ಪಕ್ಷದ ಇಬ್ರೂ ಗೆದ್ದವಿ ಅಂತ್  ಬೀಗಿಲ"್ಲ!. "ಒಬ್ರ ಕಷ್ಟಾ ಪಟ್ಟು  ಆಧಿಕಾರ ಹಿಡಿತಾರ್, ಇನ್ನೋಬ್ರು ಅಧಿಕಾರ ಹಿಡ್ದ್ರನ್ ನೋಡಿ ಕರ ಬತಾರ್". "ಬ್ಯಾರೇ ರಾಜ್ಯದ ಸುದ್ದಿ ನಮ್ಗ್ಯಾಕ್"?. "ಅದ್ನ ಅತ್ಲಾಗ ಬಿಡೂ, ಅಂದಂಗ್ ನಿಮ್ಮ ಆರೋಗ್ಯ ಮಂತ್ರಿ ರಾಮ್ಲುಅಣ್ಣ ಸರ್ಕಾರಿ ಆಸ್ಪತ್ರ್ಯಾಗ್ ದೇವಸ್ಥಾನ ಕಟ್ಟಿಸತೈತಂತ್  ಹೌದ್!   ಏನೋ ಅದ್ರ ಹಕಿಕತು"್ತ.?

"ಏ..ಅದೇನ್ ಅಂತಾ ದೊಡ್ಡ ವಿಷ್ಯಾ ಅಲ್ಲ ಬಿಡ್ರೀ"...?. "ಸರ್ಕಾರಿ ದವಾಖಾನಿಗೆ ಬರೋರ ಸಂಖ್ಯಾ  ಇತ್ತಿತ್ಲಾಗ ಹೆಚ್ಗಿ ಆಗಾಕ್ ಹತ್ತೇತಿ"?. "ಅದ್ಕ ಆರೋಗ್ಯ ಮಂತ್ರಿ  ರಾಮ್ಲು ಅಣ್ಣ್.... ಅದೇಂತಾದ್ದೋ ಏನರ್ಜಿ ಸಿಗತೈತಿ!, ಅದ್ರಿಂದ್ ಪೇಶಂಟ್‍ಗಳ್ಗೆ ಬಂದಿರೋ ರೋಗ ಲಗೂ ವಾಸಿ ಆಕ್ಕೈತಿ  ಅಂತ್ ಸರ್ಕಾರಿ ಆಸ್ಪತ್ರಿಯೋಳ್ಗ ದೇವಸ್ಥಾನ ಕಟ್ಟ್ಸಿದ್ರ ಅಲ್ಲಿ ಜನಾ ಹೋದ್ರ ಅವ್ರ್ಗೆ ಪಾಜಿಟಿವ್ ಎನರ್ಜಿ ಬರ್ತತೈತಿ, ಅವ್ರಿಗೆ ಬಂದಿರೋ ರೋಗಾ ಲಗೂ ಹೋಕ್ಕಾವು ಅಂತ್ ಹೇಳೆತಿ".?.

"ಅಲ್ಲೋ ಇದೇಂತಾ ಯೋಜ್ನಾಪಾ...! ಇರೋ ದೇವ್ರನ್ ಸಂಬಾಳ್ಸಾಕ್ ಬರೋ ಸಂಬ್ಳ ಸಾಲವಲ್ದೂ !. ಅಂತ್ ಜನ ಹೋಯ್ಯಕೊಳ್ಳಾಕ ಹತ್ಯಾರ್"?."ಸರ್ಕಾರಿ ಆಸ್ಪತ್ರ್ಯಾಗ್ ಸರ್ಕಾರಿ ದೇವ್ರ್ಯಾಕ್!".... "ಈಗಾಗ್ಲೇ ಮೂವತೈದ ಕೋಟಿ ಇದ್ದ ದೇವ್ರಗಳ ಸಂಖ್ಯಾ ಎಪ್ಪತೈದ್ ಕೋಟಿ ಆದ್ರು ಆಗಿರ್ಬೇಕು"?.  ಅಂತಾದ್ರಾಗ್ ಮತ್ತ "ಸರ್ಕಾರಿ ದಾವಾಖಾನಿ ಒಳ್ಗ-ಹೊರ್ಗ, ಗೋಡಿಮ್ಯಾಲ್, ದಾವಾಖಾನಿ ಸಂದಿ-ಗೊಂದ್ಯಾಗ ಹಂಗ್ ಕಂಡ್ ಕಾಣ್ತಾವು ಈದೇವು"್ರ?, "ಇರ್ ದೇವ್ರನ್ ಸಂಬಾಳ್ಸಾಕ್ ಆಗವಲ್ದು?.  ಅಂತಾದ್ರಾಗ್ ಮತ್ತ ಹೊಸಾ ದೇವ್ರು ಬಂದ್ರ ಹೆಂಗೋ"!. "ಆ ದೇವ್ರು  ಪೂಜಾ ಮಾಡಾಕ ಪೂಜಾರಿನ ಕೇಳ್ತಾವು"!, "ತುಪ್ಪದಾಗ ಮಾಡಿದ ಚಲೋ..ಚಲೋ ಪ್ರಸಾದಾನ ಕೇಳ್ತಾವು"?. "ಭೆಣ್ಣಿ ಸೇವಾ", "ಎಣ್ಣಿ ಸೇವಾ", "ದ್ರಾಕ್ಷಿ-ಗ್ವಾಡಂಬಿ ಸೇವಾ", ಹಿಂಗ್ ನಾನಾ ನಮೂನಿ ಸೇವಾ ಬೇಡ್ತಾವು ಆದೇವ್ರು". "ಪೂಜಾರಿಗೆ ರೊಕ್ಕಾ!, ದೇವ್ರಿಗೆ ರೊಕ್ಕಾ!, ದೇವ್ರನ್ ಬೆಟ್ಟಿ ಮಡ್ಸಾಕ್ ರೊಕ್ಕಾ! , ದೇವ್ರ ಪ್ರಸಾದ ನೀಡಕಾ ರೊಕ್ಕಾ, ಹೊಗ್ಗ ನೀನ ಹೋಗ್ ಅತ್ಲಾಗ್"!. 

"ಅಲ್ರೀ ನಿಮಗ ದೇವ್ರು ಬ್ಯಾಡಾಗಿರ್ಬಹುದ್"!, "ಆದ್ರ ನಮ್ಮ ಜನ್ರಿಗೆ ದೇವ್ರು ಬೇಕ, ಬೇಕ್"!. "ದೇವ್ರಿಗೆ ಕೈ ಮುಗೆ ಮಟ ಒಂದಕ್, ಎರಡಕ್ ಹೋಗದನ್ನು ತಡಿ ಹಿಡ್ಕಂಡ್‍ದೇವ್ರ ದರ್ಶನಕ್  ಕಾಯತಾರ್ ನಮ್ಮ ಜನಾ!".

"ದಿನಾ ಬೆಳಿಗ್ಗೆ ಟಿವ್ಯಾಗ ಮಳಾ ಉದ್ದಾ ಗಡ್ಡಾ ಬಿಟಕಂಡ್ ನಾವು  ದೇವ್ರ ವಾರಸ್ದಾರ್ರೂ ಅನ್ನೊಂಹಂಗ್ ಯಣ್ಣಿ ದೀಪಾ ಹಚ್ರೀ", "ತುಪ್ಪದ ದೀಪಾ ಹಚ್ರೀ" ಅಂತ್ "ದೇವ್ರ ಹೆಸ್ರೇಲೆ ಭವಿಷ್ಯಾ ಹೇಳೋ ದೊಡ್ಡ..ದೊಡ್ಡ ಡೊಳ್ಳ ಹೊಟ್ಟಿ ಜ್ಯೋತಿಷಿಗಳು ಜನ್ರನ್ ಹೆದ್ರ್ಸಿ ಅವ್ರ್ನ ಹಿಂಡಿ ಹಿಪ್ಪಿಮಾಡ್ತಾರ್"?. "ಅಂತಾದ್ರಾಗ ದಾವಾಖಾನಿಗಳೆಲ್ಲಾ ದೇವಸ್ಥಾನಾದ್ರ ಕಾಣ್ಕಿಗೇನೂ ಕೊರಿ ಬಿಳೋದಿಲ್ಲ ಬಿಡು"!. "ದಾವಾಖಾನಿಗೆ ಬರೋ ಜನಾ ಎಲ್ಲಾರೂ ಒಂದಂದ್ ರೂಪಾಯಿ ರೊಕ್ಕಾ ಹಾಕಿದ್ರು ಸಾಕ್ ಮೂರ ತಿಂಗ್ಳಿಗೆ ಕಾಣ್ಣಿ ಡಬ್ಬಿ ತುಂಬಿ ಆ ರೊಕ್ಕಾನ್ ಎಣ್ಸಾಕ್ ಮಷೀನ್ ತರಬೇಕ್ಕಾಕೈತಿ"!.

ಕಾಕಾರ್ ನೀವ್ ಹೇಳೋದ ನೋಡಿದ್ರ, "ಸರ್ಕಾರಿ ದಾವಾಖಾನಿಗೆ ದೇವ್ರ ಬ್ಯಾಡಾ ಅಂತಿರೇನೂ"......?

ದೇವ್ರು ಬ್ಯಾಡಾ ಅನ್ನಾಕ ನಾ ಯಾರೋ..?. "ಈ ದೇವ್ರು ಅನ್ನೋ ವಿಷ್ಯಾ ಐತೆಲ್ಲಾ, ಅದು ಬಾಳಾ ಸೂಕ್ಷ್ಮ ವಿಷ್ಯಾ". "ಅದು ಅವ್ರರವ್ರ ವ್ಯಯಕ್ತಿಕ ವಿಷ್ಯಾ"!, "ದೇವ್ರಗಳ್ನ ಬಹಿರಂಗ್‍ಕ್ಕ ತರೋದ ಒಳ್ಳೆದಲ್ಲಾ ಅನ್ನೊ ಭಾವ್ನೆ ನಂದು". "ಯಾಕಂದ್ರ ಸರ್ಕಾರಿ ಕಚೇರಿಯೋಳ್ಗ ದೇವ್ರಿಗೆ ಗುಡಿ ಕಟ್ಟಸಬೇಕು ಅಂತ್ ಸಂವಿಧಾನದಾಗ್ ಎಲ್ಲಿ  ಹೇಳಿಲ್ಲ"!, "ಸಂವಿಧಾನದಾಗ್ ಅವಕಾಶ ಇಲ್ಲಾ"!.  "ತಮ್ಮ, ತಮ್ಮ ಮನಿಯೋಳ್ಗ ಯಾವ್ ದೇವ್ರನ್‍ರ ಯಾಕ್  ಪೂಜಾ ಮಾಡಿಕೊಳ್ಳಲಿ!". "ಅದ್ನ ಬಿಟ್ಟು ಸರ್ಕಾರಿ ಆಫೀಸ್ನೋಳ್ಗ, ಸರ್ಕಾರಿ ದವಾಖಾನಿಯೋಳ್ಗ ದೇವ್ರಿಗೆ ಗುಡಿ ಕಟ್ಟಸತೇನಿ ಅನ್ನೋ ವಿಚಾರ ಒಳ್ಳೇದಲ್ಲ",?. ಯಾಕಾಂದ್ರ ಸರ್ಕಾರಿ ದಾವಾಖಾನಿಗೆ  ಒಂದ್ ಜಾತಿಯವ್ರು ಬರೋಂಗಿಲ್ಲ?. "ಎಲ್ಲಾ ಜಾತಿ-ಧರ್ಮದವ್ರು ಅಲ್ಗೆ ಬರ್ತಾರ್". "ಅವ್ರರವ್ರ ಜಾತಿ-ಧರ್ಮಕ್ಕ ಸಂಬಂಧ ಪಟ್ಟ ದೇವ್ರಿಗೆ ಆಸ್ಪತ್ರ್ಯಾಗ ಗುಡಿ ಕಟ್ಟ್ಸಿ ಕೊಡಾಕ್ ಆಕ್ಕತೇನು"?. ಅದು ಸಾಧ್ಯ ಇಲ್ದ ಮಾತು?. ಅದ್ಕ "ನಿಮ್ಮ ಮಂತ್ರಿಗಳ್ಗೆ ಹೇಳೂ ಅಸ್ಪತ್ರಿಗೆ ಬರೋ ಪೇಶಂಟ್‍ಗಳಿಗೆ ನಿಟಾಗಿ ಚಿಕಿತ್ಸಾ ಕೊಟ್ರ ಅದ್ ಒಂದ್ ದೊಡ್ಡ ಪುಣ್ಯಾದ ಕೆಲ್ಸಾ ಅಂತ್".     ಅಲ್ಲೋ ಒಂದರ್ ಸರ್ಕಾರಿ ಆಸ್ಪತ್ರಿ ಸರಿ ಅದಾವನೂ...? "ಬಿಲ್ಡಿಂಗ್ ಇದ್ರ, ಕಾಟ್ ಇಲ್ಲಾ, ಕಾಟ್ ಇದ್ರ ಷೌಷಧಿ ಇಲ್ಲಾ!". "ಡಾಕ್ಟರ್ ಇದ್ರ ನರ್ಸ್ ಇಲ್ಲಾ, ನರ್ಸ ಇದ್ರ ಡಾಕ್ಟರ್ ಇರೋದಿಲ್ಲಾ". "ಇದ್ರು ಆಸ್ಪತ್ರಿಗೆ ಬರೋ ಬಡ್ವರಿಗೆ ಸರಿಯಾಗಿ ಚಿಕಿತ್ಸಾ ಕೋಡೋದಿಲ್ಲ"!. "ಇದ್ನೆಲ್ಲಾ ಸರಿಮಾಡೋದ ಬಿಟ್ಟು ದೇವಸ್ಥಾನ ಕಟ್ಟಸತಾರಂತ್ ದೇವಸ್ಥಾನ! ಆತ್ ಬಿಡ್ರೀ ಕಾಕಾ ಅದ್ಕ್ಯಾಕ ಇಷ್ಟ್ ರಾಂಗ್ ಆಗೀರಿ, ನಮ್ಮ ಮಂತ್ರಿಗೆ ಇದ್ನೇಲ್ಲಾ ತಿಳ್ಸಿ ಹೇಳ್ತನಿ ಬಿಡ್ರೀ...!

ಏನ್ ಹೇಳ್ತಿಯೋ ಮುಸ್ಯಾ, "ನಿನ್ಗ ಆರಾಮ ಇಲ್ದಾಗ್ ಸರ್ಕಾರಿ ದಾವಾಖಾನ್ಯಾಗ ತೊರ್ಸಿಗೊಂಡಿ, ಗೊತ್ತಾಗೋದಿಲ್ಲಾ ನಿನ್ಗ!, ಹೊಟ್ಟಿಗೇನ ತಿಂತಿ.... "ಡಿ ಗ್ರೇಡ್ ನೌಕರರ ನೇಮಕಾತಿ ಇಲ್ಲ, ಆಸ್ಪತ್ರಿ ತುಂಬಾ ಕಸ -ಕಡ್ಡು ಬಿದ್ದಿರ್ತಾವು, ಆಸ್ಪತ್ರೆ ಅನ್ನೋವೂ ಗಬ್ಬನಾರ್ತಾವು!,  ಆಂಬ್ಯುಲೆನ್ಸ್ ಕೆಟ್ಟ ನಿಂತಾವು, ವೆಂಟಿಲೇಟರ್ ಇಲ್ದ ಅರ್ಧಾ ದಾರ್ಯಾಗ್ ರೋಗಿಗಳು ಸಾಯ್‍ತಾವು" .  "ಆಮ್ಲ ಜನಕ ಸಿಲಿಂಡರ್‍ಗಳ ಕೊರ್ತಿ ಎಲ್ಲ ಸರ್ಕಾರಿ ಆಸ್ಪತ್ರೆ ಒಳ್ಗು ಐತಿ". "ಸರಿಯಾಗಿ ಔಷಧಿಗಳ ದಾಸ್ತಾನು ಇಲ್ದ ಡಾಕ್ಟರ್‍ಗಳು  ಹೊರ್ಗ  ಚೀಟಿ ಬರ್ದ ಕೊಡ್ತಾರ್"!, "ರೋಗಿಗಳಿಗ್ಗೆ ಕಾಟಾ ಇಲ್ದ ರಸ್ತೆದಾಗ ಬಾಟ್ಲಿ ಹಚಿಗೆಂಡ್ ಮಕ್ಕಂಡಿರ್ತಾವು"!, "ಇವ್ನೇಲ್ಲಾ ಸರಿಮಾಡೋದ ಬಿಟ್ಟು ದಾವಾಖಾನಿ ಒಳ್ಗ ಗುಡಿ ಕಟ್ಟಿಸುವೆ ಅಂದ್ರ ಹೆಂಗ್ಯ"?.  ಸರಿಯಾಗಿ ನಿಮ್ಮ ರಾಮ್ಲು ಅಣ್ಣ ತೀಳ್ಸಿ ಹೇಳೂ!. 

ಆತ ಬಿಡ್ರೀ ಹೇಳ್ತನಿ, ಯಾಕೋ ಇವತ್ತ ಬಾಳಾ ರಾಂಗ್ ಅದೀರಿ, ನಿಮ್ಮನ್ ತಡ್ವಿದ್ದ ತಪ್ಪಾತು....!

ಹಂಗಲ್ಲೋ "ವಾಸ್ತವಾ ಬಾಳ ಕೆಟ್ಟ ಇರ್ತಾವು, ಅದ್ಕ ಹಂಗ್ ಸಿಟ್ಟಮಾಡಬೇಕಾತು"!, "ಪಾಪಾ ನಿನ್ನ ಮ್ಯಾಗ ಸಿಟ್ಟ ಇಲ್ಪಾ ನನ್ಗ!, ಈ ವ್ಯವಸ್ಥೆ ಮ್ಯಾಲ್ ಸಿಟ್ಟೈತಿ. ಹೋಗ್ಲಿ ಬಿಡೂ, ಅಂದಂಗ್ ಹಬ್ಬ ಹೆಂಗ್ ಐತೋ"...? 

"ಹಬ್ಬ... ಏನ್ ಬಿಡ್ರೀ, ದೀಪಾವಳಿ ಹಬ್ಬ ಅನ್ನೋದು ಹೆಸರ್ಗೆ ಮಾತ್ರ ಆಗೇತಿ"!. "ಈ ಹಾಳಾದ್ದ ಮಳಿ ಹಿಡ್ಕಂಡಿದ್ದು ಬಿಡವಲ್ದು"!. "ಹೊಲ್ದಾಗಿನ ಬೆಳಿ ಎಲ್ಲಾ ನೀರ್‍ಪಾಲಾಗ್ಯಾವು", "ವರ್ಷಾ ಹಬ್ಬಕ್ಕ ಹೆಂಡ್ತಿ-ಮಕ್ಳು-ಮರಿಗೆ ಹೊಸಾ ಅರ್ವಿ ಖರೀದಿ ಮಾಡ್ತಿದ್ದೆ". "ಆದ್ರ ಈವರ್ಷ ರೊಕ್ಕಾ ಇಲ್ದಕ್ ಮಕ್ಕಳಿಗೆ ಚೊಣ್ಣಾ -ಬನೀನು ತಗೋಳ್ಳಾಕು ಕೈಯಾಗ ರೊಕ್ಕ ಇಲ್ದಂಗ್ ಆಗೇತಿ"!. "ಮನ್ಯಾಗ ಮನಿಯಾಕಿ ಮಕ್ಕಳಿಗೆ ಹೊಸಾ ಅರ್ವಿ ತರ್ಲಿಲ್ದಕ್ ಜಗಳಾಡ್ಯಾಳ, ರೊಕ್ಕಾ ಇಲ್ದ ನಾನ್ ಒದ್ದಾಡಾಕ ಹತ್ತೇನಿ"...?  "ವರ್ಷಕ್ಕ ಒಂದ್ ದೊಡ್ಡ ಹಬ್ಬಾ ದೀಪಾವಳಿ, ಹುಡ್ರಿಗೆ ಹೊಸಾ ಅರ್ವಿ ತರಾಕ್ ಬೇಕು ಅಂತ್ ಗಂಟ್ ಬಿದ್ದಿದ್ಲೂ". ಮುಂಜಾನೆ ಬೇದಾಡಿದ್ದೆ.  "ಅದ್ಕ ಮನಿಯಾಕಿ ಧರ್ಮಸ್ಥಳ ಸಂಘದಾಗ ಸಾಲಾ ತರ್ತನಿ ಅಂತ್ ಸಂಘದ ಆಫೀಸ್ ಕಡಿಗೆ ಹೋಗಿದು"್ಲ, "ಅಲ್ಲಿ ಮಟಾ ಹಂಗ್ ವಿಚಾರ ಮಾಡ್ತಾ ಹೊಂಡದ ದಂಡಿಮ್ಯಾಗ ಕುತಂಗಡಿದೆ"್ದ ನೀವು ಬಂದ್ರೀ ನೋಡ್ರೀ!. "ಅಂದಂಗ್ ಕಾಕಾರ ಮೂರಸಾವ್ರಾ ರೊಕ್ಕ ಇದ್ರ ಕೊಡ್ರೀ" ಕಾಕಾ ಮಕ್ಕಳಿಗೆ ಹೊಸಾ ಅಂಗಿ-ಚೊಣ್ಣಾ ತಗಾಬೇಕು". ಮತ್ತ ಯಾವಾಗರ ನಿಮ್ಗ ರೊಕ್ಕಾನ ತೀರ್ಗಿ ಕೊಡ್ತನಿ.... 

"ಎಂತಾ ಹೊತ್ತಿನ್ಯಾಗ ರೊಕ್ಕಾ ಕೇಳ್ದೋ ತಮ್ಮಾ, ನಿಂದ್ ಹಾಸಾದ್ರ, ನಂದು ಹೊಚ್ಚಾಗೇತಿ". "ನಾನು ರೊಕ್ಕಿಲ್ದ ಬರಿಗೈಯಿ ಆಗೇನಿ!". "ಎಂಜಿ ಬ್ಯಾಂಕ್ ಕಡಿಗೆ ಸಾಲ ಕೇಳಾಕ ಅಂತ್ ಹೊಂಟಿದ್ದೆ" , "ಸಂಜಿ ಮಂದ್ ಮನಿ ಕಡಿಗೆ ಬಾ ಯಾವರ್ ಬಂದ್ರ ಒಂದಿಷ್ಟ ರೊಕ್ಕಾ ಕೊಡ್ತನಿ" ಎನ್ನುತ್ತಾ ಕಾಕಾ ವಿಷಾದದಿಂದ ಬ್ಯಾಂಕಿನ ದಾರಿ ಹಿಡಿದ.