ಸರ‍್ಕಾರಕ್ಕ್ ದಿನಾ ನೂರಾದ್ರ... ಸಂತ್ರಸ್ತರಿಗ್ಯಾಕಿಲ್ಲಾ ಒಂದು ಸೂರು...?

ಹೌದೋ ತಮ್ಮಾ , "ಲೆಕ್ಕಾಚಾರ ಇಲ್ದ ನಿಮ್ಮ ಮಂದಿ ಏನು ಮಾಡೋರಲ್ಲ"!, ಈಹಿಂದ್ ಯಡಿಯರ‍್ಸಪ್ಪ, ಶೆಟ್ರು, ಅಶೋಕ್  ಟಿಪ್ಪು ಟೋಪಿ ಹಾಕ್ಕೊಂಡು ಟಿಪ್ಪು ಸುಲ್ತಾನ್   ದೇಶ ಭಕ್ತ, ಮೈಸೂರು ಹುಲಿ, ಹಂಗ್ -ಹಿಂಗ್ ಅಂತ್ ಹಾಡಿ ಹೊಗಳಿದ್ರು, ಈಗ ನೋಡಿದ್ರ  ಉಲ್ಟಾ ಹೊಡ್ಯಾಕ್ ಹತ್ಯಾರ್ , ಇವ್ರಿಗೆ ನಾಲ್ಗಿ ರ‍್ಡೆರ‍್ಡ್ ಅದಾವ್ ಹೆಂಗ್?".

ಸರ‍್ಕಾರಕ್ಕ್ ದಿನಾ ನೂರಾದ್ರ... ಸಂತ್ರಸ್ತರಿಗ್ಯಾಕಿಲ್ಲಾ ಒಂದು ಸೂರು...?

ಎಲ್ಲೆಂತ್ ಹುಡ್ಕೋದೋ ಬಸ್ಯಾ ನಿನ್ನ!.  ಪೋನು ಬಂದ್ ಮಾಡಿಕೊಂಡಿದೀ, ನಿನ್ನ ಚಡ್ಡಿ ದೋಸ್ತಾ ಸಾತೇನಹಳ್ಳಿ ಮಲ್ಲಣ್ಣ ದರ‍್ಯಾಗ್ ಸಿಕ್ಕಾ, ಅವ್ನ ಕೇಳ್ದೆ, ಎಲ್ಪಾ ನಿನ್ನ ದೋಸ್ತ ಬಸ್ಯಾ ಅಂದ್ರ, ಅಂವಾ... "ಬಸ್‌ಸ್ಟ್ಯಾಂಡ್ ಹತ್ರ ಇದ್ರೀ, ಹುಡ್ರನ್ ರ‍್ಕೋಂಡ್ ಏನೇನೋ ತರ‍್ಸಾಕ ಹತ್ತಿದ್ದ" ಅಂತ್ ಅಂದ್ ಹೋದಾ. ನಂಗ್ ಹೆದ್ರಿಕ್ಯಾತು, ಮದ್ಲ ಈ ಬಸ್ಯಾ ಕಿಡಿಗೇಡಿ ಸು....ಮಗಾ!, "ಬಸ್‌ಸ್ಟ್ಯಾಂಡಿನ್ಯಾಗ್ ಇಂವಾ ಏನ್ ಕೆತ್ತಾ ಬಜಿ ಮಾಡಕಾಕ್ ಹತ್ಯಾನೋ ಅಂತ್ ಹೆದ್ರಿ ಓಡಿ ಬಂದೆ". ಬಸ್‌ಸ್ಟ್ಯಾಂಡಿನ್ಯಾಗ್ ಎನ್ ಮಾಡಕಾ ಹತ್ತೀ..? ಕೈಯಾಗ್ ಭಾವ್ಟಾ ಬ್ಯಾರೇ ಹಿಡ್ದಿ!, "ನವಂಬರ್ ಬಂದ ಕೂಡ್ಲೇ ನಿಮ್ಮಂತವ್ರು ನವಂಬರ್ ನಾಯಕರೂ ಆಗಿ ಬಿಡ್ತೀರಿ"!. "ಈ ತಿಂಗ್ಳಾಗ್ ಮಾತ್ರ ನೀವು  ಕನ್ನಡದ ಬಗ್ಗೆ ಕಾಳ್ಜೀ ತೋರಸ್ತೀರಿ"!," ಉಳ್ದ11 ತಿಂಗ್ಳ ಎಲ್ಲೆ ಬೇಕಲ್ಲೆ ಹಚ್ಗ ಇದ್ದಲ್ಲೇ ಕಸಾ-ಮುಸ್ರೀ ತಿಂದ್ ಬೆಚ್ಗ ಇದ್ದಲ್ಲೇ  ಚಾಪಿ ಹಾಸಿಗೊಂಡು, ಕಂಬ್ಳಿ ಹೊತಗಂಡ್ ಮಕ್ಕಂಡ್ ಬಿಡ್ತೀರಿ. ಏನ್ರಲೇ ನಿಮ್ದು ಹುಡ್ಗಾಟಾ"....?.

"ಕನ್ನಡದ ಬಗ್ಗೆ ಹುಡ್ಗಾಟಾ ಮಾಡಾಕ ಸಾಧ್ಯಿಲ್ರೀ ಕಾಕಾ!, ನಿಮ್ಮಂತವ್ರು ಕಾಡ್ತಾರ್ ಅಂತ್ ನಾ  ಮೊಬೈಲ್ ಬಂದ್ ಮಾಡಿಕೊಂಡಿದ್ದೆ"!.  "ಊಟ ಇಲ್ದ ರ‍್ತೀರಿ, ಆದ್ರ ಊರುಸಾಬರಿ ಮಾತ್ರ ಬಿಡೋದಿಲ್ಲ ನೋಡ್ರೀ.".!. "ಅಲ್ರೀ ರಾಜ್ಯೋತ್ಸವ ಬರೋದ್ ನವಂಬರ್ ತಿಂಗ್ಳಾಗ್", "ನವಂಬರ್ ಒಂದಕ್ಕ ರ‍್ಕಾದವ್ರು ರಾಜ್ಯೋತ್ಸವ ಆರ‍್ಸಿದ್ರ, ನಮ್ಮಂತ್ ಕನ್ನಡಪರ ಸಂಘಟನೆಯವ್ರು ನವಂಬರ್ ತಿಂಗ್ಳಾ ಪರ‍್ತೀ ರಾಜ್ಯೋತ್ಸವ ಹಬ್ಬಾನ್ ಆಚರಸ್ತವಿ, ನಾಡದೇವಿನ ನೆನಿತೇವಿ". ಆಲ್ರೀ... "ನವಂಬರ್ ನಾಯಕರೂ ಅಂತ್ ಬರ‍್ದ ಕೊಟ್ರೇಲ್ಲ, ಮದ್ಲಾ ಆ ಮಾತ್ ಹಿಂದಕ್ ತಗೋಳ್ರೀ" !. "ಈ ಮಾತೇನಾದ್ರು ನಮ್ಮ ವಾಟಾಳಣ್ಣನ ಕಿವಿಗೆ ಬಿದ್ರ, ಆ ಮನ್ಷಾ ನಿಮ್ಮ ಮನಿ ಮುಂದ್  ಬಂದ್  ಬಕಬರ‍್ಲೇ ಬಿದ್ದು ಓರಾಟ ಸುರುವು ಹಚಗೆಂಡ್ ಬಿಡ್ತತೀ ನೋಡ್ರೀ"?. 

ಓರಾಟಾ ಮಾಡೋರ ಬಿಡೋ ನೀವು..! "ಅಲ್ಲಾ ನಮ್ಮ ರಾಜ್ಯದಾಗ ನಾವು ಅಲ್ಪಸಂಖ್ಯಾತರಾಗೋ ಭಯಾ ನಮ್ಮನ್ ಕಾಡಾಕ್ ಹತ್ತೇತಿ"!. "ಬೆಂಗ್ಳೂರಾಗ್-ಮೈಸೂರಾಗ್ ಈಗಾಗ್ಲೇ ಜಗತ್ತಿನ ಮೂಲಿ... ಮೂಲ್ಯಾಗಿಂದ ಜನ್ರು  ಬಂದ್  ಹೊಕ್ಕಾಂಡಾರ್"?. "ಅದ್ರಾಗ್ ಒಂದನಮೂನಿ ಬೆಂಗ್ಳೂರು ಅನ್ನೋದು ಪರಸ್ಥಳದವ್ರು ಬಂದ್ ವಾಸಾ ಮಾಡೋ ಛತ್ರ ಆದಂಗ್ ಆಗೇತಿ"?. "ಹೇಳೋರಿಲ್ಲಾ  ಕೋಳೋರಿಲ್ಲಾ?. ಯಾರ್ ಬೇಕಾದ್ರು ಸರಿ ಅವ್ರು ಬಂದ್ ಇಲ್ಲೆ ಟಿಕಾಣಿ ಹೂಡಬಹ್ದು".  "ನೈಜೇರಿಯಾದೇಶದವ್ರು, ಬಾಂಗ್ಲಾದೇಶದವ್ರು, ಉಗಾಂಡಾದವ್ರು ಹಿಂಗ್ ಹುಡ್ಕೋತ ಹೋದ್ರ ಇನ್ನು ಯಾವ್ ಯಾವ್  ದೇಶದ ಜನ ಇಲ್ಲೆ ಬಂದ್ ಹೊಕ್ಕಾಂಡಾರೋ ಎನು"?.  ಮೊನ್ನೆ ನಮ್ಮ ಬೆಂಗ್ಳೂರ್ ಪೊಲೀಸ್ರು "ಬಾಂಗ್ಲಾದಿಂದ ಇಲ್ಗೆ ಬಂದ್ ಅದು ಬಿಬಿಎಂಪಿಯೋಳ್ಗ ಕೆಲ್ಸಾ ಮಾಡ್ತಿದ್ರ‍್ನ್ ಹಿಡ್ದು ಅವ್ರ ಬಾಯಿ ಬಿಡ್ಸಾö್ಯರ್". "ಇದ್ರಿಂದಾ   ಬೆಂಗ್ಳೂರಾಗ ಬ್ಯಾರೇ... ಬ್ಯಾರೆ..ದೇಶದ ಜನ ಅದಾರ್ ಅನ್ನೋದು ಸಾಭೀತಾಗೇತಿ"!.

"ಹೌದ್ರೀ.. ನಮ್ಮಂತಾ ಸಂಘಟನೆಯವ್ರು ನಾಡು-ನುಡಿಗೆ ಧಕ್ಕೆ ಬಂದಾಗ ಹೋರಾಟಮಾಡ್ಕೋತ್ ಬಂದಿದ್ರೀಂದಾ ಇಂತಾವೇಲ್ಲಾ ಪ್ರರ‍್ಣಾ ಬೆಳ್ಕಿಗೆ ಬಂದಾವು" ನೀವು ಹಂಗ್ ನಮ್ಮನ ಟೀಕಾ ಮಾಡ್ತೀರಿ...!

"ಅಲ್ಲೋ  ನಿಮ್ಮ ಕಾಳ್ಜಿಗೆ ನಾನು ಟೀಕಾ ಮಾಡಿಲ್ಲೋ!, ಆದ್ರ ಕನ್ನಡದ ಹೆಸರಿನ್ಯಾಗ್ ಕೆಲವ್ರು ಹೊಟ್ಟಿ ಹರ‍್ಕಾಂತರಲ್ಲ, ಅವ್ರö್ನ ಟೀಕಾ ಮಾಡೇನಿ". ನಿಮ್ಮಂತವ್ರು ಇದ್ರು ಸತ್ಗಿ  ಇಂತಾ ಘಟ್ನಾಗಳು ನಡ್ಯಾಕ್ ಹತ್ಯಾವಲ್ಲ", ಹೀಂಗಾದ್ರ ಹೆಂಗ್ಯ. "ಎತ್ಲಾಗ್ ನೋಡಿದ್ರು... ಬರೀ ಎನ್ನಡ -ಎಕ್ಕಡಾ, ಇಂಗ್ಲಿಷು, ಕಂಗ್ಲಿಷು, ಹಿಂದಿ, ಗುಜರಾತಿ, ಮರಾಟಿ, ಕರಾಟಿ, ಗುಜ್ರು, ಅದು -ಇದು   ಅಂತ್ ಬ್ಯಾರೇ ಬ್ಯಾರೇ ಭಾಷೆ ಮಾತಾಡೋರು ಎಲ್ಲೇರ್ ನೋಡು ಅವ್ರ ಸಿಕ್ತಾರ್"?.   "ಕೆಲ್ವು ರ‍್ಯಾದಾಗ್ ಕನ್ನಡಾಮಾತಾಡರ‍್ನ, ಕನ್ನಡಿರ‍್ನ ಹಗಲ ಹೊತ್ತಿನ್ಯಾಗ  ಹಿಲಾಲ್ ಹಚ್ಚಿ ಹುಡ್ಕಿದ್ರು ಸಿಗಂಗಿಲ್ಲ"!.  "ರ‍್ತಾ..ರ‍್ತಾ.. ಕನ್ನಡಾ ಮಾತಾಡೋರು ಕಡ್ಮಿ ಆಗ್ಯಾಕ್ ಹತ್ಯಾರ್ ನೋಡು?".

ಹೌದ್ರೀ...ಕಾಕಾ, ಅಲ್ಲಾ "ಮೊದ್ಲ ಕನ್ನಡಿಗರಿಗೆ ಕೆಲ್ಸಾ ಸಿಗವಲ್ವೂ!  ಅಂತ್ ನಾವು ಬಾಯಿ ಬಾಯಿ ಬಡ್ಕೊಂಡು ಹೊಯ್ಯಕೊಳ್ಳಾಕ ಹತ್ತೇವಿ". ಅಂತಾದ್ರಾಗ್ "ಈಬಾಡ್ಯಾಗಳು ಬಾಂಗ್ಲಾದಾಗಿಂದ ಜನ್ರ ರ‍್ಕೊಂಡ್ ಬಂದ್ ಅವ್ರನ್ ದುಡ್ಯಾಕ ಹಚ್ಚಾರ ಅಂದ್ರ ಏನ್ರೀ ಇದು"?. "ನೀವು ನೋಡಿದ್ರ ಉಗಾಂಡ್, ನೈಜೇರಿಯಾ ಅಂತ್ ಬ್ಯಾರೇ ಬ್ಯಾರೇ ದೇಶದ ಜನ್ರ ಅದಾರ ಅಂತ್ ಹೆದ್ರಸಾಕ ಹತ್ತೀರಿ, ಹಿಂಗ್ ಆದ್ರ ಮುಂದ್ ಹೇಂಗ್ಯ"...?

ಹಂಗು-ಇಲ್ಲಾ, ಹಿಂಗೂ ಇಲ್ಲಾ, "ಬ್ಯಾರೇ ದೇಶದವ್ರು ನಮ್ಮ ದೇಶಾ ನೋಡಾಕ್ ರ‍್ತಾರ್ ರ‍್ಲಿ!, ಅವ್ರು ದೇಶ ಸುತ್ತಾಡಿ ನಮ್ಮ ದೇಶಾನ್ ಮರ್ಯಾದಿಯಿಂದ ಬಿಟ್ಟ ಹೋಗಬೇಕ್"!.  "ಅದ್ನ ಬಿಟ್ಟ್, ಇಲ್ಲೆ ಜಂಡಾ ಹೂಡಿದ್ರ ಅಂತವ್ರನ್ ಹುಡ್ಕಿ, ಹುಡ್ಕಿ ಹರ‍್ಗ ಎಳ್ದ್ ನಮ್ಮ ದೇಶದಿಂದಾ ಮುಲಾಜಿಲ್ದ್ ಹರ‍್ಗ ಹಾಕಬೇಕ್". "ಅದ್ನ ಬಿಟ್ಟ್ ನಮ್ಮರ ನಮ್ಗ ಶತ್ರುಗಳು ಅನ್ನೋ ಹಂಗ್ ಹರ‍್ಗಡೆ ಬಂದ್ ಜನಕ್ ಬಾಡ್ಗಿ ಮನಿಕೊಟ್ಟು, ಅವ್ರಿಗೆ ಕೂಳು, ನೀರು ಕೊಟ್ಟೂ, ರೊಕ್ಕದ ಆಸೆಕ್ಕ್ ಅವ್ರö್ನ ಇಟ್ಕೋಂಡ್ರ್ ಹಿಂಗ್ ಮುಂದ ಒಂದ್ ದಿನಾ ಕನ್ನಡಿಗರು ಬೆಂಗ್ಳೂರಾಗ್ ಅನಾಥಾರಾಗೋ ಸ್ಥಿತಿ ಬಂದ್ರು ಬರಬಹ್ದು ನೋಡು".

ಖರೆ ಐತ್ರೀ ನಿಮ್ಮ ಮಾತು ಕಾಕಾ, ಹಂಗಾದ್ರ  ಮುಂದ್ ಹೆಂಗರಿ ಕಾಕಾ?.

ಮಹಾ ಕವಿ ಕುವೆಂಪು ಅವ್ರು ಹೇಳ್ಯಾರಲ್ " ನಮ್ಮ  ದೇಶಾ ಸರ್ವ ಜನಾಂಗದ ಶಾಂತಿಯ ತೋಟ ಅಂತ್".  

"ಹೌದೋ ನಮ್ಮ ರಾಜ್ಯ, ನಮ್ಮ ದೇಶ, ಇಲ್ಲಿ ಜನಗಳಿಂದ ಶಾಂತಿಯ ತೋಟಾಗ್ಲಿ ಅಂತ್ ಅವ್ರು ಹೇಳ್ಯಾರ್".  "ಆದ್ರ ಬ್ಯಾರೇ ದೇಶದವ್ರಿಂದಾ ನಮ್ಮ ರಾಜ್ಯಾ, ನಮ್ಮ ದೇಶಾ  ಅಶಾಂತಿ ತೋಟಾ ಆಗೋದ್ ಬ್ಯಾಡಾ ನೋಡು". "ರಾಜ್ಯಾನ್, ದೇಶಾನ ಶಾಂತಿಯ ತೋಟಾ ಮಾಡೋ ಜವಬ್ದಾರಿ, ಅಶಾಂತಿಯ ತೋಟಾ ಆಗ್ದಿರಂಗ್ ನೋಡಿಕೊಳ್ಳೋ ಹೊಣೆಗರ‍್ಕಿ ಎಲ್ಲಾರಮೇಲು ಐತಿ" ಏನ್ಪಾ ಬಸಣ್ಣಾ, "ಹೌದು,   ಏನ್ಪಾ... ನಿಮ್ಮ ಪ್ಯಾಂಟ್ ಲೆಸ್ ರ‍್ಕಾರಕ್ಕ ನೂರು ದಿನಾ ತುಂಬ್ಯಾವಂತಲ್ಲ ಹೌದ್"!. "ಶತದಿನೋತ್ಸವ ಜೋರಮಾಡಾಕ ಹತ್ತಿರಬೇಕು ನಿಮ್ಮ ಮಂದಿ"..!

"ಸಂಭ್ರಮಾ  ಮಾಡಾಕ ಎಲ್ಲೆ ಬಿಡ್ತಾರೀ ನಿಮ್ಮ  ಕೈ ಮಂದಿ"!, "ಯಲ್ಲಾದ್ಕು ನಮ್ಮ ಸಿಎಂ ಸಾಹೇಬ್ರನ್ ಟೀಕಾ ಮಾಡ್ತಾರ್"!, "ಅತಿವೃಷ್ಟಿ ಪರಿಹಾರ ಕೊಟ್ಟಿಲ್ಲಾ ಅಂತಾರ್, ಕೇಂದ್ರವ್ರು ರೊಕ್ಕಾ ಕೊಟ್ಟಿಲ್ಲ ಅಂತಾರ್, ಹೈಕಮಾಂಡ್‌ಗೆ ಯಡೆಯೂರಪ್ಪ ಒಲ್ಲದ ಶಿಶು ಅಂತಾರ್, ಈರ‍್ಕಾರ್ ಬಾಳದಿನಾ ಮುಂದವರೆಂಗಿಲ್ಲ ಅಂತಾರ್"!. "ಪಾಪಾ ನಮ್ಮ ಸಿಎಂಗ್ ಮೊದ್ಲ ವಯಸ್ಸಾಗೇತಿ"!, "ಅದು ಹೆಂಗ್ಯೋ ಕಷ್ಟಾಪಟ್ಟು ಕುರ್ಚೆ ಹಿಡ್ದೈತಿ"?, "ಒಂದ್ ಕಡಿಗೆ ಈಅನರ್ಹ ಶಾಸಕರ ಕಾಟ್, ಮತ್ತೊಂದ್ ಕಡಿಗೆ ಈಸವ್ದಿ, ಈರವ್ದಿ ಅವ್ರ ಕಾಟಾ". "ಮಾತ್ ಎತ್ತೀದ್ರ ಈ ಸಿದ್ದಾçಮಣ್ಣ, ಡಿಕೆಶಿ, ಗುಂಡುರಾವು ಎಲ್ಲಾದ್ಕು ರಾವ್ ಆಗಿ ಟೀಕಾ ಮಾಡ್ತಾರ್"?.

ಹೌದ್ಪಾ.... "ನಿಮ್ಮ ಸಿಎಂ ಭಯಂಕರ್ ಕಷ್ಟಾ ಪಟ್ಟು, 14 ತಿಂಗ್ಳು ಸಿಕ್ಕಾಪಟ್ಟೆ ಬೆವ್ರ್ ರ‍್ಸಿ ಸಿಎಂ ಆಗೇತಿ"!. "ಒಬ್ರ..ಇಬ್ರ... ಬರೋಬ್ಬರಿ15 ಮಂದಿ ಶಾಸಕರು"! "ತಮ್ಮ ಶಾಸಕ ಸ್ಥಾನಾ ತ್ಯಾಗಾ ಮಾಡಿದ್ರಿಂದಾ ಸಿಎಂ ಆಗೇತಿ"?. "ಕಂಡ್ ದೇವ್ರಿಗೆಲ್ಲಾ ರ‍್ಕಿ ಹೊತಗಂಡ್ ಮುಖ್ಯಮಂತ್ರಿ ಆಗೇತಿ"!, ಇದ್ಕೆಲ್ಲಾ ಎಷ್ಟ ರೊಕ್ಕಾ ಖರ್ಚಾಗೇತಿ?, ಏನ್ ತಾನ್".  "ಇದೇನ್ ಸಣ್ಣ ಸಾಧ್ನೇ ಅನಕೊಂಡಿ ಏನ್".? ಅದಲ್ದ  "ಹುಬ್ಳಿ ಒಳ್ಗ ಭಾಷ್ಣಾ ಮಾಡೋ ಹೊತ್ತ್ಯಾಗ ಅನರ್ಹ ಶಾಸಕರ ಬಗ್ಗೆ ಮಾತಾಡ್ತಾ... ಮಾತಾಡ್ತಾ...  ತಾನು ಹೆಂಗ್ಯ ಸಿಎಂ ಆದೇ?... ಅನ್ನೋದನ್ನ ಒಪ್ಪಿಕೊಂಡೈತಿ"!. "ಅದು ಈಮಾತ ಹೇಳೋ ಆ ವಿಡಿಯೋನ್ ರಾಜ್ಯದ ಜನ್ರರಲ್ದ ದೇಶದ eನಾನು ಸತ್ಗಿ ನೋಡ್ಯಾರ್"!. "ಈಗ ಅದ್ನ ಇಟಗೊಂಡ್ ಈ ಮರ‍್ಕ-ರ‍್ಕ್ ಕೈ ಪಕ್ಷದವ್ರು ರ‍್ತಾಳ ಮಾಡಕಾ ಹತ್ಯಾರ್"!!. "ಇದ್ಕ ಅನ್ನೋದು ಸುಮ್ನ ರ‍್ಲಾರದ ರ‍್ವಿ ಬಿಟಕೊಂಡ್ರು ಅಂತ್!".  "ಅಲ್ಲೋ ನಿಮ್ಮ ರ‍್ಕಾರಕ್ಕ ನೂರದಿನಾ ತುಂಬಿದ್ರೂ ಇನ್ನು ನೆರೆ ಸಂತ್ರಸ್ತರಿಗೆ ನೆಟ್ಗ ಪರಿಹಾರಾನ್ ಸಿಕ್ಕಿಲ್ಲಾ ಅಂತ್ ಜನಾ ಬಾಯಿ ಬಾಯಿ ಬಡ್ಕಕೊಳ್ಳಾಕ ಹತ್ಯಾರಲ್ಲೋ"?.    "ಏನಾಗೇತಿ ಅಂತಾದ್ದೂ  ನಿಮ್ಮ ರ‍್ಕಾಕ್ ದಾಡಿ"?, "ನೂರದಿನಾ ಆದ್ರೂ ಇಲ್ಲಿರ‍್ಗೂ ಒಂದ್ ಒಂದ್ ಮನಿ ಕಟ್ಸಿಲ್ಲ ಅಂತ್ ಸಿದ್ದಾçಮಣ್ಣ ಎಲ್ಲೆ ಬೇಕಲ್ಲೆ ಭಾಷ್ಣದಾಗ ತೀವ್ಯಾಕ ಹತ್ತೇತಿ"?.

"ಕಾಕಾ, ನೂರದಿನಾ ಬಾಳಾ ಕಡ್ಮಿ ಆತ್ ಬಿಡ್ರೀ...! ಇರೋ ಬರೋ ಖಜಾನ್ಯಾಗಿನ ರೊಕ್ಕಾನೆಲ್ಲ ಸಂತ್ರಸ್ತರಿಗೆ, ಮಳಿಂದ ಹಾಳಾಗಿರೋ ರೋಡ್ಗೆ, ಮಳಿಂದ ಸತ್ತಿರೋ ಜನ್ರ ಕುಟುಂಬದವ್ರಿಗೆ ಪರಿಹಾರ ಕೊಡಾಕ ಹತ್ಯಾರ್, ಪರಿಹಾರ ಕೊಡೋದು ಸ್ವಲ್ಪ ಹೆಚ್ಚು-ಕಮ್ಮಿ ಆಕೈತಿ, ತಡ್ಕಾ ಬೇಕ್ರೀ".

ತಡಿತ್ಯಾರ್ ನಿನ್ಗ, "ನಿಮ್ಮ ಪಕ್ಷದವ್ರು ವಿರೋಧಪಕ್ಷದಾಗ ಇದ್ದಿದ್ರ ಭೂಮಿ-ಆಕಾಶಾನ ಏಕ್ ಮಾಡಿ ರ‍್ತಾಳ ಮಾಡಿ, ರೋಡ್ ಬಂದ್ ಮಾಡಿ ಪ್ರತಿಭಟ್ನಾ ಮಾಡತಿದ್ರ್"?. "ಎಲ್ಲಾರೂ ಹಂಗ್... ಅಧಿಕಾರ ಇದ್ದಾಗ್ ಒಂದ್ ನಮೂನಿ, ಅಧಿಕಾರ ಇಲ್ದಾಗ್ ಇನ್ನೊಂದ ನಮೂನಿ". ನಿ ಹಿಂಗ್ ಹೇಳಾವಾ ಆದಿ...! "ಅಲ್ಲೋ ನೂರು ದಿನ ಪೂರೈಸಿರೋ ಮುಖ್ಯಮಂತ್ರಿ ಯಡಿಯರ‍್ಸಪ್ಪನ್,    ಬಿಜೆಪಿ ಸರ್ಕಾರಾ   ಪರೀಕ್ಷೆ ಒಳ್ಗ  ಉತ್ರಾನ ರ‍್ದಿಲ!್ಲ ಹಿಂಗಾಗಿ ಅವ್ರಗೆ ಯಾವ ಅಂಕ ನೀಡೋ ಅಗತ್ಯ ಇಲ್ಲ ಅಂತ್ ಸಿದ್ದ್ರಮಣ್ಣ ಹೇಳ್ಕಿ ನೀಡಿ,  ಅಧಿಕಾರಿಗಳ ವರ್ಗಾವರ್ಗಿ ಬಿಟ್ಟ್ರ ಬ್ಯಾರೇ ಏನು ಕೆಲ್ಸಾಮಾಡಿಲ್ಲ ಅಂತ್  ತೀವ್ತಿದೈ"?, "ಅಂದಂಗ್ ತೀವತಾ ಅನ್ನೊದ್ಕ ನೆನ್ಪಾತು, ನಿಮ್ಮ ಹೊನ್ನಾಳಿ ಹೋರಿಕರಕ್ ಯಾವ್ದೋ ಹೋರಿ ತೀವ್ದೈತಂತಲ್ಲೋ ಹೌದ್"!. 

ಹೌದ್ರೀ,  ಟಿವ್ಯಾಗ್ ನೀವು ನೋಡಿಲ್ಲನ್..?

ಇಲ್ಲೋ.... ನಾನು, ನೋಡಿಲ್ಲ.  "ಆದ್ರ ಪೇಪರ್‌ನ್ಯಾಗ್ ಬಂದಿದ್ದ್ ವಿಷ್ಯಾ ಓದಿದ್ದೆ, ಅಲ್ಲೋ ಈಹೊನ್ನಾಳಿ ಹೋರಿಕರಾ ಹೋರಿ ಬಿಡಲ್ಲೇ  ಯಾಕ್ ಹೋಗಿತ್ತಂತ್"?.

"ಹೋರಿ ಹೆಂಗ್ಯ ಓಡ್ತಾವು ಅನ್ನೋದನ್ ಹತ್ರದಿಂದಾ ನೋಡಾಕ ಹೋಗಿತ್ತಂತ್ರಿ"?.. "ಅವಾಗ್ ಯಾವ್ದೂ ಹಾದಿ ತಪ್ಪಿದ ಹೋರಿ ಈ ಹೋರಿಕರಾನ್ನ್ ನೋಡಿ, ಇದು ಎಲ್ಲೆ ತನ್ಗ ಪೈಪೋಟಿ ನೀಡತೈತೋ ಅಂತ್ ತಿಳ್ಕಂಡ್ ಹಂಗ್ ನುಗ್ಗಿ ಬಂದ್ ಈಹೋರಿಕರಕ್ಕ ತೀದ್ದೈತಿ ನೋಡ್ರೀ".

"ಅಂದಂಗ್ ತೀವ್ದ ಹೋರಿಕರಾ ಹೆಂಗೈತೋ" ?. "ಅದ್ಕ ಏನೂ ಆಗಿಲ್ಲನೂ!, ಈ ತೀವ್ಸಿಗೊಂಡ್ ಹೋರಿಕರ್‌ಕ್ಕ ಏನು ಆಗಿಲ್ಲನೂ"?.

"ಅಂತಾದ್ದೇನು ಆಗಿಲ್ರೀ, ಕಾಕಾ , ಈಹೊನ್ನಾಳಿ ಹೋರಿಕರಾ ಬಾಳಾ ಗಟ್ಟೈತಿ"!.

"ಹೌದ್ ಬಿಡಲೇ.... ಈಹಿಂದ್ ನೋಡೇವಿ ಇದ್ರ ಪೌರುಷಾ ಎಂತಾದ್ದು ಅಂತ್"?. "ಅದರ‍್ಲಿ ನಿಮ್ಮ ರ‍್ಕಾದವ್ರು ಟಿಪ್ಪುಗ್ ಗಂಟ್ ಬಿದ್ದಿದ್ರಲ್ಲ, ಅದ್ನ ಕೈಬಿಟ್ರ ಏನ್ ಹಂಗ್ ಮುಂದರ‍್ಸಾರ್".?

"ಎಲ್ಲೆ ಬಿಡ್ತಾರಿ.... ಮೊದ್ಲ ಉಪಚುನಾವಣೆ ಬಂದೈತಿ.  ಜನಾನು ಕಂಗಾಲಾಗ್ಯಾರ್, ಟಿಪ್ಪುನ್ ಹಿಡ್ಕಂಡ್ ಹೋದ್ರ ನಾಕ ಹೋಟ್ ಹೆಚ್ಗಿ ಬರಬಹುದು ಅನ್ನೋ ಲೆಕ್ಕಾ ಚಾರ ರ‍್ವಬೇಕು ಅನಸತೈತಿ"!.

ಹೌದೋ ತಮ್ಮಾ , "ಲೆಕ್ಕಾಚಾರ ಇಲ್ದ ನಿಮ್ಮ ಮಂದಿ ಏನು ಮಾಡೋರಲ್ಲ"!, ಈಹಿಂದ್ ಯಡಿಯರ‍್ಸಪ್ಪ, ಶೆಟ್ರು, ಅಶೋಕ್  ಟಿಪ್ಪು ಟೋಪಿ ಹಾಕ್ಕೊಂಡು ಟಿಪ್ಪು ಸುಲ್ತಾನ್   ದೇಶ ಭಕ್ತ, ಮೈಸೂರು ಹುಲಿ, ಹಂಗ್ -ಹಿಂಗ್ ಅಂತ್ ಹಾಡಿ ಹೊಗಳಿದ್ರು, ಈಗ ನೋಡಿದ್ರ  ಉಲ್ಟಾ ಹೊಡ್ಯಾಕ್ ಹತ್ಯಾರ್ , ಇವ್ರಿಗೆ ನಾಲ್ಗಿ ರ‍್ಡೆರ‍್ಡ್ ಅದಾವ್ ಹೆಂಗ್?".

ಕೆಲವ್ರಿಗೆ ರ‍್ಡ್ ನಾಲ್ಗಿ ರ‍್ತಾವ್ರೀ", "ಅಧಿಕಾರಿದ್ದಾಗ್ ಒಂದ್! , ಇಲ್ದಾಗ್ ಇನ್ನೊಂದು"!!, ಏನು ಮಾಡಾಕ್ ಆಗಂಗಿಲ್ಲ?," ಈವ್ರು ತಮ್ಗ ಹೆಂಗ್ ಬೇಕ್ ಹಂಗ್ ಹೇಳ್ತಾರ್. ಇವ್ರು ಹೇಳೋ ಮಾತ ಒಳ್ಗ ಸುಳ್ಳೆಷ್ಟು, ಜೊಳ್ಳೇಷ್ಟು, ಕರೆ ಎಷ್ಟು ಅನ್ನೋದನ್ನ ನಿಧಾನ್ಕ ಯೋಚ್ನಾಮಾಡಿ ತಿಳ್ಕೋಂಡ್ ಮುಂದ್ ಹೆಜ್ಜಿ ಇಡೋ ಜವಬ್ದಾರಿ ನಮ್ದು"?. ರ‍್ರೀ..ರ‍್ರಿ... ಮಾತಾಡಿ, ಮಾತಾಡಿ ...ಗಂಟ್ಲಾ ಒಣಗೇತಿ, ಇಂದ್ರಾ ಕ್ಯಾಂಟಿನ್ಗೆ ಹೋಗಿ ಚಾ ಕುಡೇನ ನಡ್ರಿ ಎನ್ನುತ್ತಾ ಕಾಕಾ-ಬಸ್ಯಾ ಕ್ಯಾಂಟಿನ್ ಕಡೆಗೆ ಹೆಜ್ಜೆ ಹಾಕಿದರು.