ಬಿಸಿಲ ಬೇಗೆ ನಿಯಂತ್ರಿಸಲು ಬಳಸಿ ಪರ್ ಫೆಕ್ಟ್ ಕೋಟ್-ಟಿಆರ್ ತಾಪನಿರೋಧಕ ಪೇಂಟ್

ಬಿಸಿಲ ಬೇಗೆ ನಿಯಂತ್ರಿಸಲು ಬಳಸಿ ಪರ್ ಫೆಕ್ಟ್ ಕೋಟ್-ಟಿಆರ್ ತಾಪನಿರೋಧಕ ಪೇಂಟ್

ಕರ್ನಾಟಕ ರಾಜ್ಯದಲ್ಲಿ  ಬಿಸಿಲ ಬೇಗೆ ಹೆಚ್ಚುತ್ತಿದ್ದು ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಲಕ್ಷಣಗಳು ಕಾಣುತ್ತಿವೆ. ಹಿಂದೆಂದೂ ಅನುಭವಿಸಿರದಷ್ಟು ಅಧಿಕ ಪ್ರಮಾಣದ ತಾಪಮಾನದಲ್ಲಿನ ಏರುಪೇರುಗಳನ್ನು ಈಗಾಗಲೇ ನೋಡುತ್ತಿದ್ದೇವೆ. ಹವಾಮಾನ ಬದಲಾದಂತೆಲ್ಲ ಮನುಷ್ಯನ  ಆರೋಗ್ಯದಲ್ಲಿಯು ಬದಲಾವಣೆ ಆಗುವುದು ಸರ್ವೇ ಸಾಮಾನ್ಯ.

ದಿನದಿಂದ ದಿನಕ್ಕೆ ಪ್ರಕೃತಿಯಲ್ಲಿ ಆಗುವ ವೈಪರಿತ್ಯಕ್ಕೆ  ಅಥವಾ ತಾಪಮಾನ ಬದಲಾವಣೆಗೆ  ಮನುಷ್ಯ ಅಥವಾ ಪ್ರಾಣಿಗಳ ದೇಹವು ಹೇಗೆ ಸ್ಪಂಧಿಸುತ್ತವೋ ಹಾಗೆಯೆ  ಮಾನವ ನಿರ್ಮಿತ ಕಟ್ಟಡಗಳು, ಸೇತುವೆಗಳು,ರಸ್ತೆಗಳು ಮುಂತಾದವುಗಳು ಸ್ಪಂದಿಸುತ್ತವೆ. ಮನುಷ್ಯನ ದೇಹದ  ಮೇಲೆ ಆಗುವ ಪರಿಣಾಮಗಳಂತೆ ಕಟ್ಟಡಗಳ ಮೇಲು ಪರಿಣಾಮಗಳು ಆಗುತ್ತವೆ. ಎಲ್ಲಾ ಕಟ್ಟಡಗಳು ಚಳಿಗಾಲದಲ್ಲಿ ಮುದುಡುತ್ತವೆ ಬೇಸಿಗೆಯಲ್ಲಿ ವಿಕಾಸಗೊಳ್ಳುತ್ತವೆ. ದೊಡ್ಡ ಕಟ್ಟಡಗಳಲ್ಲಿ, ಸೇತುವೆಗಳಲ್ಲಿ ಎಕ್ಸ್ ಪ್ಯಾಂಷನ್  ಜಾಯೆಂಟ್ (expansion joint) ನೀಡುವ ಮೂಲಕ ಚಳಿಗಾಲಕ್ಕೆ ಮತ್ತು ಬೇಸಿಗೆಗೆ ಹೊಂದಿಕೊಳ್ಳುವಂತೆ ನಿರ್ಮಿಸಲಾಗುತ್ತದೆ. ಮನುಷ್ಯರಲ್ಲಿ , ಪ್ರಾಣಿಗಳಲ್ಲಿ ಚರ್ಮವು ಹೇಗೆ ಶಾಖನಿರೋಧಕವಾಗಿ ಕೆಲಸ ಮಾಡುತ್ತದೋ ಹಾಗೆಯೇ ಕಟ್ಟಡಕ್ಕೆ ಬಳಸುವ ಸಿಮೆಂಟ್, ಪೈಂಟ್ ಮುಂತಾದವುಗಳು  ಸ್ವಲ್ಪ ಮಟ್ಟಿಗೆ ಶಾಖನಿರೋಧಕವಾಗಿರುತ್ತದೆ.ಮೇಲ್ ಛಾವಣಿಗಳ ಮೇಲೆ ನೇರವಾಗಿ ಬೀಳುವ ಬಿಸಿಲಿನಿಂದ ಕಾಂಕ್ರೆಟ್ ಛಾವಣಿಗಳಲ್ಲಿ ಸಣ್ಣ ಪ್ರಮಾಣದ ಬಿರುಕುಗಳು ಉಂಟಾಗಿ ಸಿಮೆಂಟ್/ ಟಾರ್  ಎದ್ದು ಬರುವ ಸಾಧ್ಯತೆಗಳಿವೆ. ಬಿಸಿಲ ಝಳ ಹೆಚ್ಚಾದಂತೆಲ್ಲ ಕಟ್ಟಡಗಳ  ಛಾವಣಿಗಳು, ಗೋಡೆಗಳು ಬಿಸಿಯಾಗುತ್ತಾ ಹೋಗುತ್ತವೆ ಮತ್ತು ಕಟ್ಟಡದ ಒಳಗಿನ ಉಷ್ಣಾಂಶವು ಹೆಚ್ಚುತ್ತದೆ.

ಆಂತರಿಕ ಉಷ್ಣಾಂಶ ಹೆಚ್ಚಾಗಿರುವುದರಿಂದ  ಅದನ್ನು ಕಡಿಮೆಪಡಿಸಲು  ಪರ್ಯಾಯ ಮಾರ್ಗಗಳಿಗೆ ಮೊರೆಹೂಗುವುದು ಅನಿವಾರ್ಯವಾಗುತ್ತಿದೆ.

 

ಸಾಮಾನ್ಯ ಮನೆಗಳಲ್ಲಿ ಮಧ್ಯಾಹ್ನದ  ಬಿಸಿಲಿಗೆ ತಾರಸಿಯು ಬಿಸಿಯಾಗಿ ರಾತ್ರಿ ವೇಳೆಗೆ ಆಂತರಿಕ ಉಷ್ಣಾಂಶ ಸ್ವಲ್ಪ ಕಡಿಮೆಯಾಗುತ್ತದೆಯಾದರು ಫ್ಯಾನ್ ಅಥವಾ ಎಸಿ ಇಲ್ಲದೆ ಮಲಗುವುದು ಕಷ್ಟಸಾಧ್ಯ. ಇನ್ನು ಸಿಮೆಂಟ್ ಶೀಟ್ ಬಳಸಿ ಚಾವಣಿ ನಿರ್ಮಿಸಿಕೊಂಡವರ ಗತಿ ದೇವರೇ ಬಲ್ಲ. ಫ್ಯಾನ್ ಅಥವಾ ಎಸಿಯನ್ನು ಉಪಯೋಗಿಸಲು ಕರೆಂಟ್ ಇರಲೇಬೇಕು ಹೆಚ್ಚಾಗಿ ಉರಿಸಿದರೆ ಕರೆಂಟ್ ಚಾರ್ಜ್ ಕೂಡ ಹೆಚ್ಚಾಗುತ್ತದೆ. ಇನ್ನು ತಾರಸಿಯ ಮೇಲೆ ಬಿಸಿಲು ಬೀಳದಂತೆ ಶೀಟ್ ಹಾಕಿಸಬಹುದು ಆದರೆ ಅದೂ ಎಲ್ಲರಿಗು ಕಷ್ಟಸಾಧ್ಯ.  ಛಾವಣಿಗಳು , ಹೆಚಾಗಿ ಬಿಸಿಲು ಬೀಳುವ ಗೋಡೆಗಳಿಗೆ ಶಾಖನಿರೋಧಕ  (cool paint ) ಪೈಂಟ್ಗಳಿಂದ ಲೇಪನ ಮಾಡಿಸಿದರೆ ಆಂತರಿಕ ಉಷ್ಣಾಂಶವನ್ನು ಕಡಿಮೆ ಮಾಡಬಹುದು. ಮಾರುಕಟ್ಟೆಗೆ  ಇಂತಹ ಅನೇಕ ಪೈಂಟ್ ಗಳು ಈಗಾಗಲೇ ಲಗ್ಗೆ ಇಟ್ಟಿವೆ, ಕೇಲವೊಂದು ಉತ್ಪನ್ನಗಳು ಸುಣ್ಣ ಮತ್ತಿತರ  ಮೂಲದ್ದಾಗಿದ್ದು ಆರು ತಿಂಗಳು ಅಥವಾ ಒಂದು ವರ್ಷದಲ್ಲಿ  ಹಪ್ಪಳದಂತೆ ಪದರಗಳಲ್ಲಿ ಎದ್ದುಬಿಡುತ್ತದೆ. ಕಾರಣ ಚಾವಣಿ ಬಿಸಿಯಾದಂತೆ  ಪೈಂಟ್ ಅಂಟಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಮಾರುಕಟ್ಟೆಯಲಿರುವ ಇತರೆ ಕೂಲ್ ಪೈಂಟ್ ಗಳು ಗರಿಷ್ಠ ಎಂದರೆ ಒಂದು ಭಾರಿ ಮಳೆಬರುವವರೆಗೂ ಇರಬಹುದು. 

ಇಂಥ ಶಾಖನಿರೋಧಕ ಪೈಂಟ್  (ಕೂಲ್ ಪೈಂಟ್) ಉದ್ಯಮಕ್ಕೆ ಹೊಸದಾಗಿ  ಸೇರ್ಪಡೆಯಾಗಿರುವುದೇ ಪರ್ಫೆಕ್ಟ್ ಕೋಟ್ ಟಿ. ಅರ್. (PERFECTCOAT TR) ಇದು  ಸಿರಾಮಿಕ್ ಬೇಸ್ ಆಗಿದ್ದು, ಸಂಪೂರ್ಣ ಪರಿಸರ ಸ್ನೇಹಿ ತಂತ್ರಜ್ಞಾನದಿಂದ ತಯಾರಿಸಲಾಗಿದೆ. ಈ ಈ ಪೈಂಟನ್ನು ಛಾವಣಿಗಳಿಗೆ ಮತ್ತು ಗೋಡೆಗಳಿಗೆ ಲೇಪನ ಮಾಡುವುದರಿಂದ ಕನಿಷ್ಠ ಪಕ್ಷ 10 ಡಿಗ್ರಿಯವರೆಗೆ ಆಂತರಿಕ ತಾಪಮಾನವನ್ನು ಕಡಿಮೆ ಮಾಡಬಹುದು.   ಈ ಪೈಂಟ್  ತಾರಸಿಯ ಮೇಲೆ ಬೀಳುವ ಸೂರ್ಯನ ಶಾಖವನ್ನು ಕಡಿಮೆ ಮಾಡುವ ಮೂಲಕ ಶಾಖವನ್ನು ತಡೆಗಟ್ಟಿ ಲೇಪಿಸಿದ ಪದರದಿಂದ ಒಳಹೋಗದಂತೆ ಮಾಡಿ ಆಂತರಿಕ ತಾಪಮಾನವನ್ನು ಕಾಯ್ದಿರಿಸಿಕೊಳ್ಳಲು ಸಹಾಯಮಾಡುತ್ತದೆ. ಸಾಮನ್ಯವಾಗಿ  ಮಧ್ಯಾಹ್ನದ ವೇಳೆ ಎಲ್ಲ ಬಾಗಿಲುಗಳನ್ನು ಮುಚ್ಚಿ, ಹೊರಗಡೆ ಹೋಗಿ ಕೆಲಸಕಾರ್ಯಗಳನ್ನು ಮಗಿಸಿ ಬಂದು ಬಾಗಿಲು ತೆಗೆದಾಗ ಉಂಟಾಗುವ ಬಿಸಿಲಿನ ಹಾಬೆ ಕಡಿಮೆಯಾಗುತ್ತದೆ ಮತ್ತು ಫ್ಯಾನಿನಿಂದ ಬರುವ ಗಾಳಿ ತಂಪಾಗಿರುತ್ತದೆ.   ಈ  ಶಾಖರೋಧಕ ಪೈಂಟ್ ಪರ್ಫೆಕ್ಟ್ ಕೋಟ್, ಜಲನಿರೋಧವು ಆಗಿದ್ದು ಮಳೆಗಾಲದಲ್ಲಿ ತಾರಸಿಯಿಂದ ಆಗುವ ಸೋರಿಕೆಯನ್ನು  ತಡೆಗಟ್ಟುತ್ತದೆ. ಪಾಚ್ಚಿ ನಿರೋಧಕವಾಗಿದ್ದು (Anti Algae ) ತಾರಸಿ ಅಥವಾ ಗೋಡೆಗಳ ಮೇಲೆ ಪಾಚ್ಚಿ ಕಟ್ಟುವುದನ್ನು ತಡೆಯುತ್ತದೆ . 

ಕನಿಷ್ಠ 3 ಪದರಗಳ ಲೇಪನ ಅತ್ಯವಶ್ಯಕ (3 coats ) . ಮೊದಲನೆಯ ಲೇಪನದಲ್ಲಿ ವಾಟೆರ್ಪ್ರೊಫಿಂಗ್ (waterproofing ) ಮತ್ತು ಉಳಿದ 2 ಲೇಪನಗಳಲ್ಲಿ ಶಾಖ ನಿರೋಧಕ ಲಕ್ಷಣಗಳನ್ನು ನೀಡುತ್ತದೆ. ಸೂರ್ಯ ಹೊರಸೂಸುವ   ಯುವಿ ಕಿರಣಗಳನ್ನೂ ಸಹ ಈ ಪೈಂಟ್ ಪ್ರತಿಪಲನ ಮಾಡುವುದರಿಂದ ಕಟ್ಟಡದ ಆಯಸ್ಸು ವೃದ್ಧಿಯಾಗುತ್ತದೆ. 

ಕಲ್ಲು, ಕಾಂಕ್ರೆಟ್ ,  ಸಿಮೆಂಟ್ ಶೀಟ್ , ಝಿನ್ಕ್ ಶೀಟ್ ನಿಂದ ನಿರ್ಮಿಸಿದ ತಾರಸಿಗಳಮೇಲೂ ಉಪಯೋಗಿಸಬಹುದು.   ಲೇಪನ ಮಾಡಿದ ಪ್ರದೇಶದ ಒಳಗಿನ ತಾಪಮಾನವನ್ನು ಈ ಪೈಂಟ್ ಕಾಯ್ಧಿರಿಸಿಕೊಳ್ಳುವುದರಿಂದ  ಫ್ಯಾನ್ ಅಥವಾ ಎಸಿಗೆ ಖರ್ಚಾಗುವ ಕರೆಂಟ್ ಚಾರ್ಜ್ ನಲ್ಲಿ ಉಳಿತಾಯವಾಗುತ್ತದೆ. ಚಳಿಗಾಲದಲ್ಲಿ ಹೊರಗಿನ ಉಷ್ಣಾಂಶ ಒಳಗೆ ಬರದಂತೆಯು ಕಾಯ್ಧಿರಿಸಿ ಬೆಚ್ಚಗಿರುವಂತೆ ಮಾಡುತ್ತದೆ ಇದರಿಂದ ರೂಮ್ ಹೀಟರ್ಗಳನ್ನು ಉಪಯೋಗಿಸುವ ಅವಶ್ಯಕತೆ ಬರುವುದಿಲ್ಲ . ಸಂಪೂರ್ಣ ಪರಿಸರ ಸ್ನೇಹಿಯಾಗಿದು ಕಡಿಮೆ ದರದಲ್ಲಿ ಉತ್ತಮ ಫಲವನ್ನು ಪಡೆಯಬಹುದು. ಒಂದು ಸಾರಿ ಪೈಂಟ್ ಮಾಡಿಸಿದರೆ ಕನಿಷ್ಠ ಪಕ್ಷ 4 ವರ್ಷ ತೊಂದರೆ ಇರುವುದಿಲ್ಲ. 

ಮಳೆಗಾಲಕ್ಕೆ ಜಲನಿರೋಧಕ (waterproofing ) ದಂತೆ ಮತ್ತು ಬೇಸಿಗೆಕಾಲಕ್ಕೆ ಶಾಖನಿರೋಧಕ (Thermal Resistant) ದಂತೆ ಕಾರ್ಯನಿರ್ವಹಿಸುತ್ತದೆ. 

ಕಾರ್ಖಾನೆಗಳಲ್ಲಿ ಈ ಪೈಂಟ್ ಉಪಯೋಗಿಸುವುದರಿಂದ ನಿರಂತರವಾಗಿ ಎ.ಸಿ  ಉಪಯೋಗಿಸುವುದನ್ನು ಕಡಿಮೆ ಮಾಡಬಹುದು ಮತ್ತು ಕೆಲಸಗಾರರು ಬಿಸಿಲಿನ ಝಳಕ್ಕೆ ಅತಿಯಾಗಿ ಒಳಪಡದೇ ಕಾರ್ಯನಿರ್ವಹಿಸಬಹುದು. ಅತಿಯಾದ ತಾಪಮಾನವಾಗದಂತೆ  ನಿಯಂತ್ರಣದಲ್ಲಿ ಇರಿಸಿಕೊಂಡು ಉಗ್ರಾಣಗಳಲ್ಲಿ ಶೇಖರಿಸುವ ಪದಾರ್ಥಗಳು ಹಾಳಾಗದಂತೆ ಕಾಪಾಡಬಹುದು.  

ರಾಜ್ಯದ ಬಿಸಿಲಿನ ಪ್ರದೇಶಗಳಾದ ರಾಯಚೂರು, ಗುಲ್ಬರ್ಗ, ಚಿತ್ರದುರ್ಗ, ದಾವಣಗೆರೆ ಮತ್ತು ಕರವಳಿ ಪ್ರದೇಶಗಳಲ್ಲಿ ಈ ಪೈಂಟ್ ನ ಬಳಕೆ ಮುಂದಿನ ದಿನಗಳಲ್ಲಿ ಅಧಿಕವಾಗುತ್ತದೆ.  

ಪರ್ಫೆಕ್ಟ್ ಕೋಟ್   ಪೈಂಟ್ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

psgpl2012@gmail.com   9945854043