ಏಷ್ಯಾಕಪ್ ರದ್ದತಿ‌ ಕುರಿತು ಮಾಹಿತಿ ಇಲ್ಲ:ಪಿಸಿಬಿ

ಏಷ್ಯಾಕಪ್ ರದ್ದತಿ‌ ಕುರಿತು ಮಾಹಿತಿ ಇಲ್ಲ:ಪಿಸಿಬಿ

2020  ರ ಏಷ್ಯಾಕಪ್‌ ಟೂರ್ನಮೆಂಟ್ ರದ್ದಾಗಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ನಿನ್ನೆ ಹೇಳಿಕೆ ನೀಡಿದ್ದರು. ಈ ಕುರಿತು ಇಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರತಿಕ್ರಿಯೆ ನೀಡಿದ್ದು, ಏಷ್ಯಾಕಪ್‌ ಟೂರ್ನಮೆಂಟ್ ರದ್ದು ಆದ ಕುರಿತು ಪಿಸಿಬಿ ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ತಿಳಿಸಿದೆ.

ಟೂರ್ನಿ ಈಗಾಗಲೇ ನಿರ್ಧಾರವಾದಂತೆ ಸೆಪ್ಟೆಂಬರ್​-ಅಕ್ಟೋಬರ್​  ಯುಎಇನಲ್ಲಿ ನಡೆಯಬೇಕಿತ್ತು. ಆದರೆ ಜಗತ್ತಿನಾದ್ಯಂತ ಕೊರೊನಾ ರುದ್ರ ನರ್ತನ ತೋರುತ್ತಿದ್ದು, ಇದರಿಂದ ಟೂರ್ನಿಯನ್ನು  ಶ್ರೀಲಂಕಾದಲ್ಲಿ ನಡೆಸಲು ಪಾಕಿಸ್ತಾನ ನಿರ್ಧರಿದೆ. 

ಆದರೆ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ನಿನ್ನೆ ಇನ್ಸ್ಟಾಗ್ರಾಮ್​ ಲೈವ್​ ಸಂದರ್ಶನದಲ್ಲಿ ಮಾತನಾಡುತ್ತಾ ಏಷ್ಯಾಕಪ್​ ರದ್ದಾಗಿದೆ ಎಂಬ ಶಾಕಿಂಗ್​ ಹೇಳಿಕೆ ನೀಡಿದ್ದರು.