ಒಮ್ಮೆ ನನ್ನನ್ನ ಕ್ಷಮಿಸಿ ಬಿಡು

ಒಮ್ಮೆ ನನ್ನನ್ನ ಕ್ಷಮಿಸಿ ಬಿಡು

ನಾನಂದ್ರೆ ಅದೆಷ್ಟು ಪ್ರೀತಿನೋ ನಿಂಗೆ..ನನಗೊಸ್ಕರ ಅಂತ ಮಾಡಿರೊದು ಒಂದಾ ಎರಡಾ,ಲೆಕ್ಕವಿಲ್ಲದಷ್ಟು. ಆದ್ರೂ ಅರಿಯದಿದ್ದದ್ದು ಬಹುಶಃ ನನ್ನದೇ ತಪ್ಪು, ಇಲ್ಲ ಇಲ್ಲ.. ಬಹುಶಃ ಅಲ್ಲ ತಿಳಿದು ಅರಿಯದೇ ನಿನ್ನನ್ನ ದೂರ ಇಟ್ಟಿದ್ದು ನನ್ನದೇ ತಪ್ಪು ಅಮ್ಮು.. ನೀನೇ ಹೇಳು ಈ ತಪ್ಪಿಗೆ ನನಗೇನು ಶಿಕ್ಷೆ ಕೋಡುವೆ..? ಹೌದು ನೀನು ನನಗೆ ಶಿಕ್ಷೆ ಕೊಡಲೇ ಬೇಕು. ನೀನು ನನಗೆ ಯಾವ ಶಿಕ್ಷೆ  ಕೊಟ್ಟರು ಅದನ್ನ ಸ್ವೀಕರಿಸಲು ಸಿದ್ದಳಿದ್ದೇನೆ. ಹೇಳು ಯಾವ ಶಿಕ್ಷೆ ಕೊಡುವೆ..? ಅಥವಾ ಈಗಲೂ ನನ್ನನ್ನ ಕ್ಷಮಿಸಿ ಬಿಡುವೆಯಾ..? ಅಯ್ಯೊ ! ಬೇಡ ಈಗಾಗಲೇ ನನ್ನಿಂದಾಗಿ ತುಂಬಾ ಕಳೆದುಕೊಂಡು ಅವಮಾನ ಅನುಭವಿಸಿ ನಿಂತಿತುವೆ. ಇನ್ನು ನಿನ್ನವಳಿಂದಾಗಿ ಏನನ್ನು ಕಳೆದುಕೊಳ್ಳುವುದು ಅವಳಿಗೆ ಇಷ್ಟವಿಲ್ಲ.

ನನಗೆ ಈಗಲೂ ಚೆನ್ನಾಗಿ ನೆನಪಿದೆ ಆಕೆ ಇರುವ ಕಾರಣಕ್ಕೆ ನೀನು ಆ ಕೊನೆಯ ದೃಷ್ಯವನ್ನ ನೋಡದೇ ಇಂಜೆರೆದು ಹೋಗಿದ್ದು.. ಆದ್ರೆ ಕ್ಷಮಿಸಿ ಬಿಡು ಗೆಳೆಯ, ನನ್ನಿಂದಾಗಿಯೇ ನನಗೊಸ್ಕರನೇ ಇಷ್ಟೆಲ್ಲಾ ಮಾಡುತ್ತಿರುವೆ ಎಂದು ಒಂದು ಸುಳಿವು ಸಿಗಲಿಲ್ಲ, ಇಲ್ಲ ನಾನು ಸೋತು ಹೋದೆ ಹುಡುಕಿದ್ದರೆ ಒಂದು ಸಣ್ಣ ಸುಳಿವಾದರೂ ನನ್ನ ಪಾಲಿಗೆ ಸಿಗುತ್ತಿತ್ತು. ನಿನ್ನ ಬಗ್ಗೆ ಯೋಚಿಸಲೇ ಇಲ್ಲವಲ್ಲ, ನನ್ನ ಬಗ್ಗೆ ನನಗೆ ಮುಜುಗರವಾಗುತ್ತಿದೆ. ಆದ್ರೆ ಅಮ್ಮು ನಾನು ನಿನಗೆ ಈಗ ಒಂದು ಭರವಸೆ ಕೊಡುವೆ, ಇನ್ನು ಮುಂದೆ ಈ ತರಹದ ತಪ್ಪಾಗದ ರೀತಿ ಕಣ್ಣ ರೆಪ್ಪೆಯಾಗಿ ನೋಡಿಕೊಳ್ಳುತ್ತೇನೆ. ಇದು ನಿನ್ನವಳು ನೀನು ಇಷ್ಟು ವರ್ಷಗಳ ಕಾಲ ಕಾದು ಪ್ರೀತಿ ಮಾಡುತ್ತಿದ್ದೆ ಅಲ್ವಾ..? ಅವಳು ನಿನಗೆ ಕೊಡುತ್ತಿರುವ ಮಾತಿದು..ಪ್ಲೀಸ್ ಒಮ್ಮೆ ನನ್ನನ್ನ ಕ್ಷಮಿಸಿ ಬಿಡು ಬಂಗಾರ..

ಚೈತ್ರ ಕೆ.ಟಿ ಹಳ್ಳಿ