ಕಾವೇರಿ ಬಂಗಲೆ, ಡಾಕ್ಟರ್ ಹೆಸರಲ್ಲಿ ಭೇಟಿಯ ಸುತ್ತ....

ಸರ್ಕಾರಿ ಸವಲತ್ತು ಪರಭಾರೆ ಮಾಡುವಂಥದ್ದಲ್ಲ. ಹೀಗಿದ್ದರೂ ಸಚಿವರಾಗಿದ್ದ ಜಾರ್ಜ್ ಕೊಟ್ಟಿದ್ದ ಕಾವೇರಿ ಮನೆಯನ್ನ ಅವರು ಸಿದ್ದರಾಮಯ್ಯ ವಾಸ್ತವ್ಯಮುಂದುವರಿಸಲು ಬಿಟ್ಟುಕೊಟ್ಟಿದ್ದರು ಎನ್ನುವುದಾದರೆ, ಇಲ್ಲಿ ಮೂಲ ಆಶಯವೇ ಉಲ್ಲಂಘನೆಯಾಗಿಲ್ಲವೇ? ಇದು ಕೂಡ ದುರುಪಯೋಗವೇ ಅಲ್ಲವೇ?

ಕಾವೇರಿ ಬಂಗಲೆ, ಡಾಕ್ಟರ್ ಹೆಸರಲ್ಲಿ ಭೇಟಿಯ ಸುತ್ತ....

ಕಾವೇರಿ ಬಂಗಲೆಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಸಣ್ಣ ಪ್ರಮಾಣದಲ್ಲಿ ವಾಗ್ಬಾಣದ ವಿನಿಮಯಗಳಾದವು. ಅದು ಒತ್ತಟ್ಟಿಗಿರಲಿ, ಇಡೀ ಪ್ರಕರಣದಲ್ಲಿನ ಮೂಲಾಂಶವನ್ನೆ ಬದಿಗಿರಿಸಿಬಿಡಲಾಗಿದೆ.

ಸರ್ಕಾರಿ ಸವಲತ್ತು ಪರಭಾರೆ ಮಾಡುವಂಥದ್ದಲ್ಲ. ಹೀಗಿದ್ದರೂ ಸಚಿವರಾಗಿದ್ದ ಜಾರ್ಜ್ ಕೊಟ್ಟಿದ್ದ ಕಾವೇರಿ ಮನೆಯನ್ನ ಅವರು ಸಿದ್ದರಾಮಯ್ಯ ವಾಸ್ತವ್ಯಮುಂದುವರಿಸಲು ಬಿಟ್ಟುಕೊಟ್ಟಿದ್ದರು ಎನ್ನುವುದಾದರೆ, ಇಲ್ಲಿ ಮೂಲ ಆಶಯವೇ ಉಲ್ಲಂಘನೆಯಾಗಿಲ್ಲವೇ? ಇದು ಕೂಡ ದುರುಪಯೋಗವೇ ಅಲ್ಲವೇ?

ಸಾಧ್ಯವಿದ್ದಷ್ಟೂ ಕಪ್ಪು ಚುಕ್ಕೆ ರಹಿತವಾಗಿರಲು ಯತ್ನಿಸುವ ಸಿದ್ದರಾಮಯ್ಯ, ಇನ್ನೊಬ್ಬರ ಹೆಸರಿಗೆ ಕೊಟ್ಟಿದ್ದ ಬಂಗಲೆಯನ್ನ ಬಳಸಿಕೊಳ್ಳಬಾರದೆಂಬ ಸೂಕ್ಷ್ಮತೆ ಏಕೆ ಮರೆತರು ಎಂಬುದೇ ಇಲ್ಲಿ ಚರ್ಚೆಯಾಗುತ್ತಿಲ್ಲ. ಬದಲಿಗೆ ಸರ್ಕಾರ ಮತ್ತು ಸಿದ್ದರಾಮಯ್ಯ ನಡುವಣ ಜುಗಲ್‍ಬಂಧಿಯದ್ದೇ ಸುದ್ದಿಯಾಗಿದೆ.

ಇದರಂತೆಯೇ,  ಬಂಧಿಯಾಗಿ ಆಸ್ಪತ್ರೆಯಲ್ಲಿದ್ದ ಡಿ.ಕೆ.ಶಿವಕುಮಾರ್‍ರನ್ನ ಭೇಟಿಯಾಗಲು ಪರಮೇಶ್ವರ್ ತಮ್ಮ ಹೆಸರಿನ ಹಿಂದಿರುವ `ಡಾಕ್ಟರ್' ಎಂಬುದನ್ನ ಬಳಸಿಕೊಂಡರಂತೆ. ಈ ಐಡಿಯಾವನ್ನ ಖುದ್ದು ಡಿಕೆಶಿಯೇ ಕೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಇದು ಬಹುದೊಡ್ಡ ಹುದ್ದೆ ಅನುಭವಿಸಿದವರೇ ಸುಳ್ಳು ಗುರುತುಗಳ ಮೊರೆ ಹೋಗಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದರ ಜತೆಯಲ್ಲೇ, ಭೇಟಿಗಾಗಿಯೇ ಇಂಥ ಐಡಿಯಾ ಹುಡುಕುವವರು ಹಣ ಆಸ್ತಿ ವಿಚಾರದಲ್ಲಿ ಇನ್ನೆಷ್ಟೆಲ್ಲ ಐಡಿಯಾ ಹುಡುಕಿಕೊಂಡಿರಬಹುದು ಎಂಬ ಚರ್ಚೆಗೂ ಕಾರಣವಾಗಿದೆ.

ಮೇಲ್ನೋಟಕ್ಕೆ ಮನೆ ವಿಚಾರ, ಭೇಟಿ ವಿಚಾರ ಸಣ್ಣದಾದರೂ, ಸಾಮಾನ್ಯ ವ್ಯಕ್ತಿಯೇನಾದರೂ ಹೀಗೆ ಮಾಡಿದ್ದರೆ ಅದು ಸಣ್ಣದಾಗಿಯೇ ಇರುತ್ತಿತ್ತಾ ಎಂಬ ಪ್ರಶ್ನೆಗಳೂ ಸಾರ್ವಜನಿಕವಾಗಿ ಅಂಡಲೆಯುತ್ತಿವೆ.

ಇಂಥ ಸಮಯದಲ್ಲೇ, ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರನ್ನ ನೋಡುವುದು ಸುಲಭವಾಗಿರಲಿಲ್ಲ. ಆಗ ದಳದಲ್ಲೇ ಇದ್ದ ಬಚ್ಚೇಗೌಡರು ದೆಹಲಿಗೋಗಿ ತಮ್ಮ ಹೆಸರು ಹೇಳಿಕೊಂಡಾಗ, ಕನ್ನಡ ಗೊತ್ತಿಲ್ಲದ ಆರಕ್ಷಕರು ಗೌಡರ ಮಗ ಎಂದು ಅರ್ಥೈಸಿಕೊಂಡು ಮನೆಯೊಳಕ್ಕೆ ಸೀದಾ ಬಿಟ್ಟಿದ್ದರಂತೆ - ಎಂಬ ಜೋಕು ನೆನಪಾಗುತ್ತೆ.  ಆದರೆ ಈ ಜೋಕಿಗೂ, ಸಿದ್ದರಾಮಯ್ಯ ಬೇರೆಯವರಿಗೆ ಮಂಜೂರಾಗಿದ್ದ ಸರ್ಕಾರಿ ಬಂಗಲೆಯಲ್ಲಿದ್ದು ದುರುಪಯೋಗ ಮಾಡಿಕೊಂಡಿದ್ದಕ್ಕೂ, ಡಿಕೆಶಿ ಡಾಕ್ಟರ್ ಎಂದು ಕೊಟ್ಟ ಐಡಿಯಾ ನಡುವೆ ಸಾಮ್ಯತೆಯನ್ನ ಹುಡುಕುವುದು ಅಸಂಬದ್ಧ.