ಅಪನಗಧೀಕರಣದ  ಸತ್ಯ  ಘಟನೆಗಳು

ಅಪನಗಧೀಕರಣದ  ಸತ್ಯ  ಘಟನೆಗಳು

ಕೇಂದ್ರ ಸರ್ಕಾರವು ರೂ.2000 ಮತ್ತು ರೂ.500 ಬೆಲೆಯ ನೋಟುಗಳನ್ನು 2016ರಲ್ಲಿ ಅಪನಗದಿಕರಣಗೊಳಿಸಿತು, ಈ ಸಂದರ್ಭದಲ್ಲಿ ಜನಸಾಮಾನ್ಯರು ಯಾವ ರೀತಿ ಸಮಸ್ಯೆಗೆ ಒಳಪಟ್ಟರು. ಕಾಳಧನಿಕರು ಬಡವರನ್ನು ಹೇಗೆ ಉಪಯೋಗಿಸಿಕೊಂಡರು ಎಂಬುದು ಎಲ್ಲರೂ ನೋಡಿದ್ದು, ಕೇಳಿದ್ದು ಆಗಿದೆ.ಅದಕ್ಕಿಂತಲೂ ಭಿನ್ನವಾದ ಒಂದಷ್ಟು ಸಂಗತಿಗಳನ್ನು ‘ಜನ್‍ಧನ್’ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಬೆಂಗಳೂರು  ಟು ಚಿತ್ರದುರ್ಗವೆಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಹಾಗಂತ ತಂಡವು ಏಕಾಏಕಿ ಮಾಹಿತಿ  ಕಲೆಹಾಕಿಲ್ಲ. ಅಡಿಪಾಯದಲ್ಲಿ ಸಂಶೋಧನೆ ನಡೆಸಿ ಮತ್ತಷ್ಟು ವಿಷಯಗಳನ್ನು ಸಂಗ್ರಿಹಿಸಿಕೊಂಡಿದೆ.  ಜನ್‍ ಅಂದರೆ ಕಾಮನ್, ಧನ್‍ಗೆರಾಯಲ್‍ ಅಂತಾರೆ. ಇವರೆಡರ ಮಧ್ಯೆ ನಡೆಯುವುದೇ ಸಿನಿಮಾದ ಸಾರಾಂಶವಾಗಿದೆ. ಇದರ ಜೊತೆಗೆ ಸಿನಿಮಾದಲ್ಲೊಂದು ಸಿನಿಮಾದ ಕತೆಯನ್ನು ಹೇಳಲಾಗಿದೆ.ಒಟ್ಟಾರೆ ಒಂದು ದಿನದಲ್ಲಿ ನಡೆ ಯುವಕತೆಯಾಗಿರುವುದು ವಿಶೇಷ.ದ್ವಿತಿಯಾರ್ಧದಲ್ಲಿಒಂದು ದೃಶ್ಯ ನೋಡದೆ ಇದ್ದರೆ ಮುಂದಿನ ಸನ್ನಿವೇಶಗಳು ಅರ್ಥವಾಗುವುದಿಲ್ಲವಂತೆ.

ಮರಡಿಹಳ್ಳಿ ನಾಗಚಂದ್ರ ಸಿನಿಮಾಕ್ಕೆ ಕತೆ, ನಿರ್ದೇಶನ ಅಲ್ಲದೆ ಬಂಡವಾಳದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಸುನಿಲ್‍ ಶಶಿ ನಾಯಕನಾಗಿ ಆರಂಗ್ರೇಟಂ.ರಚನಾ ದಶರಥ ನಾಯಕಿ. ಇಬ್ಬರು ತೆರೆ ಮೇಲೆ ಇದೇ ರೀತಿ ನಟನೆ ಮಾಡಿರುವುದು ವಿಶೇಷ. ನಿರ್ದೇಶಕನಾಗಿ ಅರುಣ್, ಖಳನಾಗಿ ಸುಮನ್‍ಶರ್ಮ, ಜಯಲಕ್ಷೀ ಮುಂತಾದವರ ನಟನೆ ಇದೆ. ತಲಾ ಒಂದೊಂದು ಗೀತೆಗಳಿಗೆ ಸಂಗೀತ ಸಂಯೋಜಿಸಿರುವುದು ವಿಕ್ಕಿ, ಎಸ್.ಪಿ.ಚಂದ್ರಕಾಂತ್ ಮತ್ತು ಟಾಪ್‍ ಸ್ಟಾರ್‍ರೇಣು. ಅದರಲ್ಲೂ ಕೊನೆಯವರು ಕೆಲಸದ ಜೊತೆಗೆ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ಕುವರಯಲ್ಲಪ್ಪ, ವಿಕ್ಕಿ ಹಾಗೂ ನಿರ್ದೇಶಕರ ಸಾಹಿತ್ಯವಿದೆ.ಗೂರವನಹಳ್ಳೀ ಮಹಾಲಕ್ಷೀ ಅಮ್ಮನ ಮೊಮ್ಮಗಳಾದ ಶ್ರೀ ಲಕ್ಷೀಪ್ರಸನ್ನ   ‘ದೀಪೋತ್ಸವ ಲಕ್ಷೀ ದೀಪೋತ್ಸವ’ ಕಂಠದಾನ ಮಾಡುವಜೊತೆಗೆ ಹಾಡಿನಲ್ಲಿ ಕಾಣಿಸಿಕೊಂಡಿರುವುದು ಮತ್ತೋಂದು ಹಿರಿಮೆಯಾಗಿದೆ. ಬೆಂಗಳೂರು, ಚಿತ್ರದುರ್ಗ, ಸಿರಾ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.

ಆಡಿಯೋ ಸಿಡಿಯನ್ನು ಬಿಡುಗಡೆ ಮಾಡಿದ ಲಹರಿವೇಲು ಮಾತನಾಡಿ ಅನಾಣ್ಯೀಕರಣ ಸಂದರ್ಭದಲ್ಲಿ ಸಾಮಾನ್ಯರಿಗೆ ತೊಂದರೆ ಆಗಿಲ್ಲ. ಶ್ರೀಮಂತರು, ತೆರಿಗೆ ಪಾವತಿಸದವರಿಗೆ  ಅನಾನುಕೂಲವಾಯಿತು. ನಿರ್ಮಾಪಕರ ಸಿನಿಮಾಕ್ಕೆ ಜನ ಜಾಸ್ತಿ ಬಂದು, ಧನ ಹೆಚ್ಚು ಬರಲೆಂದು ಶುಭಹಾರೈಸಿದರು. ನಟ ಧರ್ಮಕೀರ್ತಿರಾಜ್‍ ಕಾರ್ಯಕ್ರಮದಲ್ಲಿ ಸಾಕ್ಷಿಯಾಗಿದ್ದರು.ಪ್ರಾರಂಭದಲ್ಲಿ ಗಣ್ಯರಿಂದ ಸಸಿಗೆ ನೀರು ಹಾಕುವ ಮೂಲಕ ಪರಿಸರ ಕಾಳಜಿ ಬಗ್ಗೆ ಅರಿವು ಮೂಡಿಸುವ ಕಲ್ಪನೆಯು ಅರ್ಥಪೂರ್ಣವಾಗಿತ್ತು. ಆರ್.ತ್ಯಾಗರಾಜು ಸಹನಿರ್ಮಾಪಕರಾಗಿರುವ ಚಿತ್ರವು ಇದೇ ತಿಂಗಳು ಬಿಡುಗಡೆಯಾಗುವ  ಸಾದ್ಯತೆ ಇದೆ.