2023ರ ಪುರುಷರ ಹಾಕಿ ವಿಶ್ವಕಪ್ ಗೆ ಭಾರತದ ಆತಿಥ್ಯ

2023ರ ಪುರುಷರ ಹಾಕಿ ವಿಶ್ವಕಪ್ ಗೆ ಭಾರತದ ಆತಿಥ್ಯ

ಲಾಸನ್ನೆ:ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ 2023ರ ಪುರುಷರ ಹಾಕಿ ವಿಶ್ವಕಪ್ ಅತಿಥ್ಯ ವಹಿಸಿಕೊಳ್ಳುವ ಅದ್ಭುತ ಅವಕಾಶವನ್ನು  ಭಾರತದ ಪಾಲಿಗೆ ನೀಡಿದೆ. ಈ ಮೂಲಕ ಭಾರತದ ಸತತ ಎರಡನೇ ಬಾರಿಗೆ ಇಂತಹ ಅವಕಾಶ ಪಡೆದುಕೊಂಡಿದೆ.

ಪುರುಷರ ಹಾಕಿ ವಿಶ್ವಕಪ್ ಭಾರತದಲ್ಲಿ ಜನವರಿ 13 ರಿಂದ 29 2023ರವರೆಗೆ ನಡೆಯಲಿದೆ ಎಂದು ಎಫ್ಐಹೆಚ್ ಹೇಳಿದೆ. ಈ ಮುನ್ನ 1982(ಮುಂಬೈ),2010(ನವದೆಹಲಿ),ಮತ್ತು 2018(ಭುವನೇಶ್ವರ)ದಲ್ಲಿ ಪುರುಷರ ಹಾಕಿ ವಿಶ್ವಕಪ್ ಆಯೋಜನೆಯಾಗಿತ್ತು. ಇದು ಭಾರತಕ್ಕೆ ಸಿಕ್ಕಿರುವ ನಾಲ್ಕನೇ ಅವಕಾಶವಾಗಿದೆ. ಹಾಗೆಯೇ ನಾಲ್ಕು ಬಾರಿ ಅತಿಥೇಯ ರಾಷ್ಟ್ರವಾಗಿ ಹಾಕಿ ವಿಶ್ವಕಪ್ ನಡೆಸಿದ ಮೊದಲ ದೇಶವೆಂದು ಭಾರತ ಗುರುತಿಸಿಕೊಂಡಿದೆ. ಇನ್ನುಳಿದಂತೆ ನೆದರ್ಲ್ಯಾಂಡ್ಸ್ ಮೂರು ಪುರುಷರ ಪಂದ್ಯಾವಳಿಗಳನ್ನು ಆಯೋಜಿಸಿತ್ತು. ಇನ್ನೊಂದು ಗಮನಾರ್ಹ ಸಂಗತಿ ಎಂದರೆ 2023ರಲ್ಲಿ ಭಾರತವು ಸ್ವಾತಂತ್ರ್ಯ ಹೊಂದಿ 75 ವಸಂತಗಳನ್ನು ಪೂರೈಸಲಿದೆ, ಆ ಸಂದರ್ಭದಲ್ಲಿ ದೇಶದ ಕ್ರೀಡಾ ಬೆಳವಣಿಗೆಯನ್ನು ಪ್ರದರ್ಶಿಸಲು ಹಾಕಿ ಇಂಡಿಯಾ ವಿಶ್ವಕಪ್ ನ್ನು ಆಯೋಜಿಸಲು ಬಯಸಿತು. ಪುರುಷರ ವಿಶ್ವಕಪ್ ನ ಮುಂದಿನ ಆವೃತ್ತಿಯನ್ನು ಆಯೋಜಿಸಲು ಭಾರತವಲ್ಲದೆ ಬೆಲ್ಜಿಯಂ ಮತ್ತು ಮಲೇಷ್ಯಾಗಳು ಬಿಡ್ ಸಲ್ಲಿಸಿದ್ದವು, ಮಹಿಳಾ ವಿಶ್ವಕಪ್ ಗಾಗಿ ಜರ್ಮನಿ,ಸ್ಪೇನ್,ನೆದರ್ ಲ್ಯಾಂಡ್ಸ್,ಮಲೇಷ್ಯಾ ಮತ್ತು ನ್ಯೂಜಿಲೆಂಡ್ ಬಿಡ್ ಸಲ್ಲಿಕೆ ಮಾಡಿದ್ದವು.ಇನ್ನು ಪಂದ್ಯ ನಡೆಯುವ ಸ್ಥಳಗಳನ್ನು ಆಯಾ ಆತಿಥೇಯ ರಾಷ್ಟ್ರಗಳು ಮುಂದಿನ ದಿನಗಳಲ್ಲಿ ಘೋಷಿಸಲಿವೆ.

.