ರವಿಶಂಕರ್ ಎದುರು ಮನೆಯಲ್ಲಿ ಕೊರೋನಾ, ಭಯದಲ್ಲಿದ್ದ ಕುಟುಂಬಕ್ಕೆ ಧೈರ್ಯ ತುಂಬಿದ ಗಣಪ, ಸುದೀಪ್, ಸೃಜನ್

ರವಿಶಂಕರ್ ಎದುರು ಮನೆಯಲ್ಲಿ ಕೊರೋನಾ, ಭಯದಲ್ಲಿದ್ದ ಕುಟುಂಬಕ್ಕೆ ಧೈರ್ಯ ತುಂಬಿದ ಗಣಪ, ಸುದೀಪ್, ಸೃಜನ್

ಕೊರೋನಾ ಭೀತಿ ಈಗ ಸ್ಯಾಂಡಲ್ ವುಡ್ ಅಂಗಳಕ್ಕೂ ಕಾಲಿಟ್ಟಿದ್ದು, ಸ್ಯಾಂಡಲ್ ವುಡ್ ತಾರೆಯರಿಗೂ ಕೊರೋನಾ ಆತಂಕ ಸೃಷ್ಟಿಯಾಗಿದೆ. ಸುದೀಪ್ ಮನೆಯ ಪಕ್ಕದ ಮನೆಯಲ್ಲಿಯೇ ಕೊರೋನಾ ಇರುವುದು ಪತ್ತೆಯಾಗಿದೆ. ಇನ್ನೂ ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟ ರವಿಶಂಕರ್ ಗೌಡ ಅಪಾರ್ಟ್ ಮೆಂಟ್ ನಲ್ಲಿಯೂ ಕೊರೋನಾ ಕರಿನೆರಳು ಆವರಿಸಿದೆ.

ಹೊಸೆಕೆರೆಹಳ್ಳಿ ಸಮೀಪವಿರುವ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ನಟ ರವಿಶಂಕರ್ ಕೂಡ ಕುಟುಂಬ ವಾಸವಿದೆ. ರವಿಶಂಕರ್ ಇದ್ದ ಮನೆಯ ಎದುರು ಮನೆಯಲ್ಲಿಯೇ ಕೊರೋನಾ ಪತ್ತೆಯಾದ ಹಿನ್ನಲೆ ರವಿಶಂಕರ್ ಪತ್ನಿ ಮಕ್ಕಳು ಆತಂಕದಲ್ಲಿದ್ದು, ಭಯದಲ್ಲಿರುವ ರವಿಶಂಕರ್ ಕುಟುಂಬಸ್ಥರಿಗೆ ಅವರ ಸ್ನೇಹಿತರು ಧೈರ್ಯ ತುಂಬಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರವಿಶಂಕರ್ ಎದುರು ಮನೆಗೆ ಕೊರೋನಾ ವಕ್ಕರಿಸಿದೆ. ಮಕ್ಕಳನ್ನು ದೇವರೆ ಕಾಪಾಡಬೇಕು. ಬಾಗಿಲನ್ನು 14 ದಿನ ತೆರೆಯುವಂತಿಲ್ಲ ಕ್ವಾರಂಟೈನ್ ಮಾಡಲಾಗಿದೆ. ಸುದೀಪ, ಗಣಪ, ಸೃಜಾನ , ಮಕ್ಕಳನ್ನು ಕರೆದುಕೊಂಡು ನಮ್ಮನೆಗೆ ಬಾ ಅಂದರು. ಇದು ಗೆಳೆತರ ಅಂದ್ರೆ. ವಿಚಾರಿಸಿದ, ಸಂತೋಷ್ ಆನಂದ್, ರಘುರಾಮ್ ಧನ್ಯವಾದಗಳು ಎಂದಿದ್ದಾರೆ.

ಇನ್ನು ಸಹೃದಯದ ಅಣ್ಣ ತಮ್ಮಂದಿರ. ನನ್ನ ಹಾಗೂ ನನ್ನ ಕುಟುಂಬದ ಮೇಲೆ ಅಭಿಮಾನವಿಟ್ಟು ನಿ್ಮ್ಮ ಅಂತರಾತ್ಮದಿಂದ ಹರಸಿದ್ದೀರಿ. ನಿಮ್ಮೆಲ್ಲರ ಹೊಟ್ಟೆ ತಣ್ಣಗಿರಲಿ. ನಿಮ್ಮ ಕುಟುಂಬಕ್ಕೂ ದೇವರ ಆರ್ಶಿವಾದವಿರಲಿ ನಮಸ್ಕಾರ ಎಂದು ಧೈರ್ಯ ತುಂಬಿದ ಸ್ನೇಹಿತರಿಗೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.